Welcome to sunamipatrike   Click to listen highlighted text! Welcome to sunamipatrike
Wednesday, September 17, 2025
HomeUncategorizedಕುಡಿತ; ಹಣ, ಗೌರವ ಎರಡನ್ನೂ ಕಳೆಯುತ್ತೆ, ಕೊನೆಗೆ ಪ್ರಾಣವನ್ನು ಹೊತ್ತೊಯ್ಯುತ್ತೆ. ಮದ್ಯಪಾನ ದಿಂದ ದೂರವಿರಿ- ಶಾಸಕ...

ಕುಡಿತ; ಹಣ, ಗೌರವ ಎರಡನ್ನೂ ಕಳೆಯುತ್ತೆ, ಕೊನೆಗೆ ಪ್ರಾಣವನ್ನು ಹೊತ್ತೊಯ್ಯುತ್ತೆ. ಮದ್ಯಪಾನ ದಿಂದ ದೂರವಿರಿ- ಶಾಸಕ ಕೆ.ನೇಮಿರಾಜನಾಯ್ಕ್.

  • ಸುನಾಮಿನ್ಯೂಸ್, ಸೆ, 11

* ಹಗರಿಬೊಮ್ಮನಹಳ್ಳಿ/ವಿಜಯನಗರ

ಕುಡಿತದ ಚಟ ದಿಂದಾಗಿ ಇವತ್ತು ಸಾಕಷ್ಟು ಕುಟುಂಬಗಳ ಬದುಕು ಬೀದಿಗೆ ಬಂದಿರುವುದು ನಮ್ಮ ಕಣ್ಣಮುಂದೆ ಕಾಣ್ತಾಯಿದ್ದೇವೆ. ಮದ್ಯವ್ಯಸನಿಗಳಾದವರ ಕುಟುಂಬಗಳು ಈ ಸಮಾಜದಲ್ಲಿ ಗೌರವಯುತವಾದ ಬದುಕನ್ನು ಸಾಗಿಸಲು ಸಾಧ್ಯವಾಗ್ತಾಯಿಲ್ಲ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್ ರವರು ವಿಷಾದ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಪುಣ್ಯಕ್ಷೇತ್ರ ನಂದಿಪುರದ ಶ್ರೀ ಗುರು ದೊಡ್ಡ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಮಧ್ಯಾಹ್ನ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸಂಘದವರು ಏರ್ಪಡಿಸಿದ್ದ 1976ನೇ ಮಧ್ಯವರ್ಜನೆ ಶಿಬಿರಕ್ಕೆ ಚಾಲನೆ ನೀಡಿ ಶಾಸಕರು ಮಾತನಾಡಿದರು

ಮದ್ಯಪಾನ ಎನ್ನುವುದು ಅತಿಯಾದ ಚಟವಾಗಿ ಪರಿವರ್ತನೆಗೊಂಡಾಗ ಇಂತಹ ಅನಾಹುತಗಳು ಸಹಜ. ಹೀಗಾಗಿ ಪ್ರತಿಯೊಬ್ಬರೂ ಮದ್ಯ ಸೇವನೆಯಿಂದ ದೂರ ಉಳಿದುಕೊಂಡಾಗ ಮಾತ್ರವೇ ಅವರವರ ಕುಟುಂಬದ ಜೊತೆಗೆ ಸುಖ ಸಂತೋಷದಿಂದ ಬದುಕಲು ಸಾಧ್ಯವಾಗುತ್ತದೆ ಎಂದರು.

ಕುಡಿತ ದಿಂದ ನೀವು ದೂರ ಸರಿದಾಗ ಮಾತ್ರವೇ, ನಿಮ್ಮ ಕುಟುಂಬಗಳು ಸಹ ಈ ಸಮಾಜದಲ್ಲಿ ಗೌರವಯುತವಾದ ಬದುಕನ್ನು ಸಾಗಿಸಲು ಸಾಧ್ಯವಿದೆ. ನಿಮಗಾಗಿ ಅಲ್ಲದಿದ್ರೂ ನಿಮ್ಮನ್ನು ನಂಬಿಕೊಂಡಿರುವ ತಂದೆ,ತಾಯಿ, ಹೆಂಡತಿ,ಮಕ್ಕಳಿಗೆ ಈ ಸಮಾಜದಲ್ಲಿ ಗೌರವಯುತವಾದ ಜೀವನ ಸಾಗಿಸಲಾದರೂ ನೀವು ಈ ಕ್ಷಣ ದಿಂದಲೇ ಮದ್ಯಪಾನ ನಿಲ್ಲಿಸುವಂತೆ ಶಿಬಿರದಲ್ಲಿ ಭಾಗವಹಿಸಿರುವ ಕುಡಿತದವ್ಯಾಸನಿಗಳಲ್ಲಿ ಶಾಸಕರು ಮನವಿ ಮಾಡಿಕೊಂಡರು.

ತಾಲೂಕಿನ ಪುಣ್ಯಕ್ಷೇತ್ರ ನಂದಿಪುರದ ಶ್ರೀ ಗುರು ದೊಡ್ಡ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸಂಘದವರು ಏರ್ಪಡಿಸಿದ್ದ 1976ನೇ ಮಧ್ಯವರ್ಜನೆ ಶಿಬಿರಕ್ಕೆ ಚಾಲನೆ ನೀಡಿ ಶಾಸಕರು ಮಾತನಾಡಿದರು.

ನಂದಿಪುರದ ಚರಂತೆಶ್ವರ ಶಿವಚಾರ್ಯ ಸ್ವಾಮೀಜಿ, ಹಾಲಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯ್ಕ್, ಜೆಡಿಎಸ್ ತಾಲೂಕಾಧ್ಯಕ್ಷರಾದ ವೈ.ಮಲ್ಲಿಕಾರ್ಜುನ, ಬಿಜೆಪಿ ಜಿಲ್ಲಾಧ್ಯಕ್ಷರಾದ ಸಂಜೀವ ರೆಡ್ಡಿ, ಮುಖಂಡರಾದ ಎನ್ ವೆಂಕಣ್ಣ, ಜಗದೀಶ್ ಜಿಎಂ, ಪುರಸಭೆ ಸದಸ್ಯ ದೀಪಕ್ ಸಾ ಕಠಾರಿ, ಚಿತ್ತವಾಡಿಗೆ ಪ್ರಕಾಶ್, ಬಾದಾಮಿ ನಟರಾಜ ಸೇರಿದಂತೆ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!