* ಸುನಾಮಿನ್ಯೂಸ್, ಜುಲೈ,26
ಕೃಷ್ಣಾ ಮೇಲ್ದಂಡೆ ಮೂರನೇಯ ಹಂತದ ಯೋಜನೆಯ ಜಾರಿ ವಿಚಾರದಲ್ಲಿ ವಿಧಾನಪರಿಷತ್ತಿನ ನಿಕಟ ಪೂರ್ವ ವಿರೋಧಪಕ್ಷದ ನಾಯಕರಾದ ಎಸ್ಸಾರ್ ಪಾಟೀಲ್ ಅವರು ಸದನದ ಒಳಗೆ,ಹೊರಗೆ ನಿರಂತರವಾಗಿ ಗಟ್ಟಿ ಧ್ವನಿ ಎತ್ತುತ್ತಲೇ ಬರುತ್ತೀರುವುದು ಇಡೀ ನಾಡಿಗೆ ಗೊತ್ತಿರುವ ವಿಚಾರ. ಈ ವಿಚಾರದಲ್ಲಿ ಅವರೇಂದು ಕೂಡ ಹಿಂದಡಿ ಹೆಜ್ಜೆ ಇಟ್ಟವರಲ್ಲ.
ತಾವೇ ಅಧ್ಯಕ್ಷರಾಗಿರುವ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಬೆಳ್ಳಿ ಹಬ್ಬ ಆಚರಣೆಯ ಸಮಾರಂಭದಲ್ಲೂ ಕೂಡ ಕೃಷ್ಣಾ ಮೇಲ್ದಂಡೆ ಮೂರನೇಯ ಹಂತದ ಯೋಜನೆಯ ಜಾರಿ ಕುರಿತಂತೆ ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ಅವರು ಬರೀ ನೆನಪು ಮಾಡಿಕೊಳ್ಳಲಿಲ್ಲ ಬದಲಿಗೆ ಈ ಯೋಜನೆ ಜಾರಿಯಾಗಬೇಕೆಂದು ಹಕ್ಕೋತ್ತಾಯ ಕೂಡ ಮಂಡಿಸುವ ಮೂಲಕ ಈ ಯೋಜನೆಯ ಜಾರಿಯ ವಿಚಾರದಲ್ಲಿ ತಮಗಿರುವ ಬದ್ಧತೆಯನ್ನು ವೇದಿಕೆಯ ಮೇಲೆ ಕುಳಿತಿದ್ದ ಕರ್ನಾಟಕ ಸರ್ಕಾರದ ಸಚಿವರು, ಶಾಸಕರುಗಳಿಗೆ ಮನದಟ್ಟು ಮಾಡಿಕೊಟ್ಟರು.
ಪ್ರಸ್ತಾವಿಕ ಭಾಷಣದಲ್ಲಿ ಅವರು ಹೆಚ್ಚು ‘ಪೋಕಸ್ ‘ಮಾಡಿದ್ದು ಕೂಡ ಕೃಷ್ಣಾ ಮೇಲ್ದಂಡೆ ಮೂರನೇಯ ಹಂತದ ಯೋಜನೆಯ ಜಾರಿಯ ಮೇಲೆ. ಸಮಾರಂಭದಲ್ಲಿ ಆಪಾರ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ಪಾಟೀಲರ್ ಒಂದೊಂದು ಮಾತಿಗೂ ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಪಾಟೀಲರ ಹಕ್ಕೋತ್ತಾಯಕ್ಕೆ ತಮ್ಮ ಸಹಮತವನ್ನು ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಸಚಿವರುಗಳು ಎಸ್ಸಾರ್ ಪಾಟೀಲರು ಪ್ರಸ್ತಾಪಿಸಿದ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇಯ ಹಂತದ ಜಾರಿ ಕುರಿತಂತೆ ಗಂಭೀರವಾಗಿಯೇ ಮಾತನಾಡಿದ್ದಲ್ಲದೇ ಈ ವಿಚಾರದಲ್ಲಿ ಸರ್ಕಾರ ಅನುಷ್ಠಾನಗೊಳಿಸುವಂತೆ ನಿರಂತರ ಒತ್ತಡ ಹೇರುವುದಾಗಿಯೂ ಸಚಿವರುಗಳು ಭರವಸೆ ಇತ್ತಿದ್ದು ಎಸ್ಸಾರ್ ಪಾಟೀಲರ ಮಾತಿನ ತೂಕವನ್ನು ನೂರ್ಮಾಡಿಗೊಳಿಸಿತು.
ಶುಕ್ರವಾರ ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ಬಳಿಯ ಬಾಡಗಂಡಿಯ ಎಸ್ಸಾರ್ ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿಗೆ ಇಪ್ಪತ್ತೈದು ವಸಂತ ಭರ್ತಿಯಾದ ಹಿನ್ನೇಲೆಯಲ್ಲಿ ರಜತ ಸಂಭ್ರಮಾಚರಣೆಯ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಹಿರಿಯ ಸಚಿವರಾದ ಕೆಹೆಚ್.ಮುನಿಯಪ್ಪ, ಹೆಚ್.ಕೆ.ಪಾಟೀಲ್, ಶಿವಾನಂದ ಪಾಟೀಲ್, ಸತೀಶ್ ಜಾರಕಿಹೊಳಿ, ಆರ್.ಬಿ.ತಿಮ್ಮಾಪುರ, ಸಂಸದರಾದ ಪಿಸಿ.ಗದ್ದಿಗೌಡರ್, ಶಾಸಕರಾದ ಹೆಚ್.ವೈ.ಮೇಟಿ, ಭೀಮಸೇನ ಚಿಮನಕಟ್ಟಿ, ಎಮ್ಮೇಲ್ಸಿ ಪಿಹೆಚ್ ಪೂಜಾರ್, ಹನುಮಂತ ನಿರಾಣಿ ಸಹಿತ ಸಹಕಾರ ರಂಗದ ಸಾಕಷ್ಟು ಮುಖಂಡರುಗಳು ಭಾಗವಹಿಸಿದ್ರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.