- ಸುನಾಮಿನ್ಯೂಸ್, ಜುಲೈ,28
ಗಂಗಕಲ್ಯಾಣ ಯೋಜನೆಯ ಮೂಲಕ ಶಾಶ್ವತ ನೀರಾವರಿ ಸೌಲಭ್ಯ ಪಡೆದು ಉತ್ತಮ ಕೃಷಿಕರಾಗಿ, ನಾಡಿಗೆ ಅನ್ನದಾತರಾಗುವಂತೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಕೆ ನೇಮಿರಾಜ ನಾಯ್ಕ ಅವರು ಗಂಗಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಕರೆ ನೀಡಿದರು.
ಸೋಮವಾರ ಮುಂಜಾನೆ ಪಟ್ಟಣದ ತಮ್ಮ
ತಮ್ಮ ಗೃಹ ಕಚೇರಿಯ ಮುಂಭಾಗದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಆದಿ ಜಾಂಬವ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಆಯ್ಕೆಗೊಂಡ ಫಲಾನುಭವಿಗಳಿಗೆ ಉಚಿತ ಮೋಟಾರ್ ಪಂಪ್ ಸೆಟ್, ಪೈಪ್ ಸಹಿತ ಪೂರಕ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ,ಸಮುದಾಯಗಳನ್ನು ಆರ್ಥಿಕವಾಗಿ ಸಬಲೀಕರಣವಾಗಿಸಲು ಸರ್ಕಾರ ಅನುಷ್ಠಾನಗೊಳಿಸುತ್ತೀರುವ ಹಲವು ಯೋಜನೆಗಳಲ್ಲಿ ಗಂಗಕಲ್ಯಾಣವೂ ಒಂದಾಗಿದೆ. ಈ ಯೋಜನೆಯಡಿ ಆಯ್ಕೆಗೊಂಡಿರುವ ನೀವುಗಳು ಯೋಜನೆಯನ್ನು ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಶಾಸಕರು ಹೇಳಿದರು.
ಜೆಡಿಎಸ್ ಪಕ್ಷದ ತಾಲೂಕ ಅಧ್ಯಕ್ಷರಾದ ವೈ ಮಲ್ಲಿಕಾರ್ಜುನ್, ಉಲುವತ್ತಿ ವಿ.ಎಸ್.ಎಸ್.ಏನ್ ಅಧ್ಯಕ್ಷರಾದ ಕನ್ನೆಹಳ್ಳಿ ಚಂದ್ರಶೇಖರ್, ಜಿ ಎಂ. ಜಗದೀಶ್,
ಪಾಂಡುರಂಗ ನಾಯ್ಕ,ಚಲವಾದಿ ರಮೇಶ, ಉಪ್ಪಾರ್ ಸಮುದಾಯದ ತಾಲೂಕಾಧ್ಯಕ್ಷ ಕನಕಪ್ಪ , ವಿಶ್ವಕರ್ಮ ಸಮಾಜ ತಾಲೂಕ ಅಧ್ಯಕ್ಷರಾದ ಹೋಟೆಲ್ ಸಿದ್ದರಾಜು, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಅರುಣ್ ಕುಮಾರ್, ಶಾಸಕರ ಆಪ್ತ ಸಹಾಯಕ ಬ್ಯಾಟಿ ನಾಗರಾಜ ಸೇರಿ ಹಲವರು ಭಾಗವಹಿಸಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.