- ಸುನಾಮಿನ್ಯೂಸ್, ವಿಜಯನಗರ, ಜುಲೈ,25
ರಾಜ್ಯ, ಕೇಂದ್ರ ಸರ್ಕಾರಗಳು ತೋಟಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ, ಸಾಕಷ್ಟು ಅನುದಾನವನ್ನು ನೀಡುತ್ತಿದೆ. ಆರ್ಹ ಬೆಳೆಗಾರರನ್ನು ಗುರುತಿಸಿ ಸರ್ಕಾರದ ಹಣ ಸದ್ಭಳಕೆ ಆಗಿ, ತೋಟಗಾರಿಕಾ ವಲಯದ ಪ್ರಗತಿಯ ಹೊಣೆಗಾರಿಕೆ ಅಧಿಕಾರಿಗಳದ್ದಾಗಿದ್ದು, ನಾಡು ಮತ್ತು ರೈತರ ಹಿತವನ್ನು ಗಮನದಲ್ಲಿಟ್ಟು ಕೊಂಡು ಕರ್ತವ್ಯ ನಿರ್ವಹಿಸುವಂತೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಬೆಳಿಗ್ಗೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದ ಶ್ರೀ ಹಗರಿ ಅಂಜನೇಯಸ್ವಾಮಿ ದೇವಸ್ಥಾನದ ಬಳಿ 2023-24ನೇ ಸಾಲಿನ ತೋಟಗಾರಿಕಾ ಕಟ್ಟಡಗಳ ಯೋಜನೆಯಡಿಯಲ್ಲಿ 50 ಲಕ್ಷರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ(ಜಿಪಂ) ಕಚೇರಿ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನಾನು ಪ್ರತಿನಿಧಿಸುತ್ತೀರುವ ಹಗರಿಬೊಮ್ಮನಹಳ್ಳಿ ಕ್ಷೇತ್ರ ತೋಟಗಾರಿಕೆಯಲ್ಲಿ ರಾಜ್ಯದಲ್ಲಿಯೇ ಪ್ರಮುಖವಾಗಿ ಗುರುತಿಸುವಷ್ಟರ ಮಟ್ಟಿಗೆ ಬೆಳೆದಿರುವುದು ಸಂತಸದ ವಿಚಾರ. ಇಲ್ಲಿ ಬೆಳೆಯುತ್ತೀರುವ ದಾಳಿಂಬೆ, ಪಪ್ಪಾಯಿ, ದ್ರಾಕ್ಷಿ, ಮಾವು, ಕಲ್ಲಂಗಡಿ, ಪೇರಲ, ವಿಳ್ಯೆದ ಎಲೆ, ಅಂಜೂರ…… ರಾಜ್ಯದ ಗಡಿ ಧಾಟಿ ದೇಶದ ವಿವಿಧ ಭಾಗಗಳ ಮಾರುಕಟ್ಟೆಗೆ ಪೂರೈಕೆ ಆಗುತ್ತೀರುವುದು ಇದು ತೋಟಗಾರಿಕಾ ಕ್ಷೇತ್ರದ ಸಾಧನೆ ಎಂದರು.
ತೋಟಗಾರಿಕಾ ವಲಯದಲ್ಲಿ ಲಭಿಸಿರುವ
ಈ ಶ್ರೇಯಸ್ಸು ತೋಟಗಾರಿಕಾ ಕ್ಷೇತ್ರವನ್ನು ಆಯ್ದು ಕೊಂಡಿರುವ ನಮ್ಮ ಬೆಳೆಗಾರರಿಗೆ ಸಲ್ಲಬೇಕು ಎಂದ ಶಾಸಕರು, ಆಗೇನೆ ಕಾಲ,ಕಾಲಕ್ಕೆ ಬೆಳೆಗಾರರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತೀರುವ ಅಧಿಕಾರಿ ವರ್ಗದ ಕಾರ್ಯಕ್ಕೂ ಮೆಚ್ಚುಗೆ ಸೂಚಿಸಿದರು.
ಪ್ರಸ್ತುತ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತೀರುವ ಹೆಚ್. ರಾಜೇಂದ್ರ ಅವರು ರೈತ ಸ್ನೇಹಿ ಅಧಿಕಾರಿ ಆಗಿದ್ದು. ಸರ್ಕಾರದ ಯೋಜನೆಗಳನ್ನು ಬೆಳೆಗಾರರ ಮನೆ ಬಾಗಿಲಿಗೆ ಮುಟ್ಟಿಸುವ ಮೂಲಕ ಪ್ರಮಾಣಿಕವಾಗಿ ಕಾರ್ಯನಿರ್ವಹಿಸುತ್ತೀದ್ದಾರೆ. ತೋಟಗಾರಿಕಾ ವಲಯದ ಬಗ್ಗೆ ಅವರಿಗೆ ಅಪಾರವಾದ ಜ್ಞಾನ ಇದ್ದು ಅದನ್ನು ಬೆಳೆಗಾರರಿಗೆ ಧಾರೇ ಎರೆಯುತ್ತಿದ್ದಾರೆ ಎಂದು ಅಧಿಕಾರಿಯ ಕಾರ್ಯವೈಖರಿಯನ್ನು ಶಾಸಕರು ಈ ವೇಳೆ ಪ್ರಶಂಸಿದರು.
ಪಿಜಿ.ಚಿದಾನಂದಪ್ಪ, ತೋಟಗಾರಿಕೆ ಉಪನಿರ್ದೇಶಕರು, ಜಿಪಂ ವಿಜಯನಗರ, ಪುರಸಭೆ ಅಧ್ಯಕ್ಷರು ಮರಿರಾಮಪ್ಪ, ಜೆಡಿಎಸ್ ಕ್ಷೇತ್ರ ಅಧ್ಯಕ್ಷರಾದ ವೈ.ಮಲ್ಲಿಕಾರ್ಜುನ, ಹಿರಿಯ ಮುಖಂಡರಾದ ಕಿನ್ನಾಳ ಸುಭಾಶ, ಪ್ರಗತಿಪರ ರೈತರಾದ ಮೈನಳ್ಳಿ ಕೊಟ್ರೇಶಪ್ಪ, ಬಡಿಗೆರ್ ಸಿದ್ದರಾಜ, ಶಾಸಕರ ಆಪ್ತ ಸಹಾಯಕ ಬ್ಯಾಡಿ ಮಲ್ಲೇಶ್, ಸುನೀಲ್ ನಾಯ್ಕ್, ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಸೇರಿದಂತೆ ಹಲವರು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತೋಟಗಾರಿಕೆ ಹಿರಿಯ ಸಹಾಯ ನಿರ್ದೇಶಕರಾದ ಹೆಚ್.ರಾಜೇಂದ್ರ ಅವರು ನಿರೂಪಿಸಿದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.