* ಸುನಾಮಿನ್ಯೂಸ್, ಜುಲೈ,25
ವಿಜಯನಗರ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಆಗಿ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಎಸ್.ಜಾಹ್ನವಿ ಅವರು ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಹಗರಿಬೊಮ್ಮನಹಳ್ಳಿ ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ.
ಪಟ್ಟಣದ ರಾಮನಗರದ ಗುರುಭವನದಲ್ಲಿ ಇತ್ತಿಚಿಗೆ ಇಲಾಖೆ ಪರಿಚಯಿಸಿರುವ ‘ಮನೆ,ಮನೆಗೆ ಪೊಲೀಸ್’ ವಿನೂತನ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ವಿಜಯನಗರ ಎಸ್ಪಿ ಅವರು ಚಾಲನೆ ನೀಡಲಿದ್ದಾರೆ. ಎಂದು ಹಗರಿಬೊಮ್ಮನಹಳ್ಳಿ ವೃತ್ತದ ಸಿಪಿಐ ವಿಕಾಸ್ ಲಮಾಣಿ ಮತ್ತು ಪಟ್ಟಣ ಠಾಣೆಯ ಪಿಎಸ್ಐ ಬಸವರಾಜ ಅಡವಿಬಾವಿ ಅವರು ‘ಸುನಾಮಿನ್ಯೂಸ್’ಗೆ ತಿಳಿಸಿದ್ದಾರೆ.
ಕೂಡ್ಲಿಗಿ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಅವರು ಕೂಡ ಎಸ್ಪಿ ಅವರ ಜೊತೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕಾರಣ
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಿನೂತನ ಉಪಕ್ರಮದ ಬಗ್ಗೆ ಮಾಹಿತಿ ತಿಳಿದುಕೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.