* ಸುನಾಮಿನ್ಯೂಸ್, ಜೂನ್,14
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ನಿತ್ಯ ಅಕ್ರಮ ಮರಳುಗಾರಿಕೆ ಹೆಗ್ಗಿಲ್ಲದೆ ನಡೆಯುತ್ತಿದ್ದರು ಅದನ್ನು ತಡೆಯಲು ಸಂಬಂಧ ಪಟ್ಟ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿಗಳ ಮೌಲ್ಯದ ರಾಯಲ್ಟಿ ನಷ್ಟ ಆಗುತ್ತಿದೆ ಎಂದು ರಾಜ್ಯದ ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಟಿ.ರವಿಕುಮಾರ ಆರೋಪಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಮತ್ತು ಸ್ವಚ್ಛ ಸಮಾಜದ ನಿರ್ಮಾಣದ ಮಹತ್ತರವಾದ ಉದ್ದೇಶ ಇಟ್ಟುಕೊಂಡಿರುವ ಟಿ.ರವಿಕುಮಾರ, ಎಲ್ಲಿಯೇ ಅನ್ಯಾಯ ನಡೆದಿರುವುದು ಗಮನಕ್ಕೆ ಬರಲಿ ಇಲ್ಲವೆ ಕಣ್ಣಾರೆ ಕಂಡರೇ ತಕ್ಷಣವೇ ಸೋಷಿಯಲ್ ಮಿಡಿಯಾದ ಮೂಲಕ ಪ್ರತಿಕ್ರೀಯಿಸುವ, ಸಂದರ್ಭ ಒದಗಿ ಬಂದರೇ ಆಪಾಯವನ್ನೆ ಮೈಮೇಲೆ ಎಳೆಎದುಕೊಳ್ಳಲು ಹಿಂದೇ,ಮುಂದೆ ಯೋಚಿಸದಂತಹ ಗಟ್ಟಿಗರೆಂದೆ ಹೆಸರುಗಳಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ನಡೆಯುತ್ತೀರುವ ಆಕ್ರಮ ಮರಳುಗಾರಿಕೆ ಸಂಬಂಧವಾಗಿ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಶನಿವಾರ ತಮ್ಮ ಹೇಳಿಕೆಯನ್ನು ಅವರು ಪೊಸ್ಟ್ ಮಾಡಿದ್ದಾರೆ.
ಒಂದು ದಿನಕ್ಕೆ ಕನಿಷ್ಠ 30 ರಿಂದ 40 ಓವರ್ಲೋಡ್ ಮರಳು ತುಂಬಿದ ಗಜಗಾತ್ರದ ಟಿಪ್ಪರ್ ಗಳು ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಹಗಲು,ರಾತ್ರಿ ಎಗ್ಗಿಲ್ಲದೆ ನಿತ್ಯ ರಾಜಾರೋಷವಾಗಿ ಓಡಾಡುತ್ತಿವೆ. ರಾಯಲ್ಟಿ ಇಲ್ಲದೆ ಈ ಪ್ರಮಾಣದಲ್ಲಿ ಮರಳು ಸಾಗಾಟವಾದರೂ ಗಣಿ ಇಲಾಖೆ ಕಣ್ಣು ಮುಚ್ಚಿರುವುದು ಸಂಶಯಕ್ಕೆ ಎಡೆ ಮಾಡಿದೆ ಎಂದು ರವಿಕುಮಾರ ತಮ್ಮ ಪೊಸ್ಟ್ ನಲ್ಲಿ ಆರೋಪಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಪರೋಕ್ಷ ಬೆಂಬಲವಿಲ್ಲದೆಯೇ ಮರಳು ಪಾಯಿಂಟ್ ನಲ್ಲಿ ಲಾರಿಗಳು ಓವರ್ಲೋಡ್ ಮಾಡಿಕೊಂಡು ಪಟ್ಟಣದಲ್ಲಿ ಓಡಾಡಲು ಸಾಧ್ಯವೇ ಇಲ್ಲ ಎಂದು ರವಿಕುಮಾರ ಅವರು ಆಕ್ರಮ ಮರುಳು ಸಾಗಾಟಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯತ್ತ ಸಂಶಯದ ಬೆರಳು ತೋರಿದ್ದಾರೆ.
ಆಕ್ರಮ ಮರಳು ಸಾಗಾಟವನ್ನು ಪತ್ತೆಹಚ್ಚಲು
ಈ ಹಿಂದೆ ಪಟ್ಟಣದಲ್ಲಿ ಸಿಸಿ ಕ್ಯಾಮೆರಾ ಹಾಕಿಸಿ ಅಂತಾ ನಾನು ಹಲವು ಸಲ ಇಲ್ಲಿನ ಪುರಸಭೆ ಹಾಗೂ ಅಕ್ಕಪಕ್ಕದ ಸ್ಥಳೀಯ ಸಂಸ್ಥೆಗಳಿಗೆ ಮನವಿ ಕೊಟ್ಟರು ಸಹ ಇಲ್ಲಿಯ ತನಕವೂ ಸಿಸಿ ಕ್ಯಾಮೆರಾ ಅಳವಡಿಸಿಲ್ಲ ಎಂದಿರುವ ಸಾಮಾಜಿಕ ಕಾರ್ಯಕರ್ತ ರವಿಕುಮಾರ, ಒಂದು ಪಕ್ಷ ಸಿಸಿ ಕ್ಯಾಮರಾ ಹಾಕಿದರೆ ಇಂತಹ ಅಕ್ರಮಗಳು ಬೆಳಕಿಗೆ ಬರುತ್ತವೆ ಅಂತ ಸಿಸಿ ಕ್ಯಾಮೆರಾ ಹಾಕಲಿಲ್ಲ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆ ತಡೆಯುವುದಕ್ಕೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮರಳು ಸಮಿತಿ ಮತ್ತು ತಾಲೂಕು ಮಟ್ಟದಲ್ಲಿ ತಾಲೂಕು ಮರಳು ಸಮಿತಿಗಳು ಇರುತ್ತವೆ. ಅದರಲ್ಲಿ ತಾಲೂಕಿನ ಮತ್ತು ಜಿಲ್ಲೆಯ ಸಂಬಂಧಪಟ್ಟ ಎಲ್ಲಾ ಇಲಾಖೆಯ ಮುಖ್ಯಸ್ಥರು ಸದಸ್ಯರಾಗಿರುತ್ತಾರೆ.
ಈ ಸಮಿತಿಗಳು ಅಕ್ರಮ ಮರಳು ಗಣಿಗಾರಿಕೆಯನ್ನು ತಡೆದು ಸರ್ಕಾರಕ್ಕೆ ನಷ್ಟ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಈ ಸಮಿತಿಗಿದೆ.
ಆದರೇ ಈಗ ಹಾಡು ಹಗಲೇ ಕಣ್ಣ ಮುಂದೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ನೋಡುತ್ತಿದ್ದರೆ ಈ ಸಮಿತಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಮ್ಮ ಪೊಸ್ಟ್ ನಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ರವಿಕುಮಾರ ವಿವರಿಸಿದ್ದಾರೆ.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.