* ಸುನಾಮಿನ್ಯೂಸ್, ಜೂನ್,15
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ಗುರುಭವನದ ಬಳಿ ಇರುವ ನಾಣಿಕೆರಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು 50 ಲಕ್ಷರೂಗಳ ವೆಚ್ಚದಲ್ಲಿ ಅತ್ಯಂತ ಸುಂದರವಾಗಿ ಪುನರುಜ್ಜೀವನಗೊಳಿಸಲಾಗುತ್ತದೆ ಎಂದು ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್ ಹೇಳಿದ್ದಾರೆ.
ಪುನರುಜ್ಜೀವನ ಕಾರ್ಯದ ಆರಂಭದ ಭಾಗವಾಗಿ ಶನಿವಾರ ಮಧ್ಯಾಹ್ನ ದೇವಾಲಯದ ಆವರಣದಲ್ಲಿ ಕೊಳವೆಬಾವಿ ಕೊರೆಯುವ ಕಾರ್ಯಕ್ಕೆ ಭೂಮಿಪೂಜೆಯನ್ನು ಶಾಸಕರು ನೇರವೇರಿಸಿದರು.
ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮರಿಯಮ್ಮನಹಳ್ಳಿ ಪಟ್ಟಣದಲ್ಲಿರುವ ಐತಿಹಾಸಿಕ ನಾಣಿಕೆರಿಯ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಶ್ರೀಭೂದೇವಿ ಮತ್ತು ಶ್ರೀ ಆಂಜನೇಯನ ಸ್ವಾಮಿಯವರ ದೇವಸ್ಥಾನದ ಜೀರ್ಣೋದ್ಧಾರ ಕೆಲಸವನ್ನು ಅಚ್ಚುಕಟ್ಟಾಗಿ ಮತ್ತು ಸುಂದರವಾಗಿ ಮಾಡಿರುವಂತಹ ಉಡುಪಿ ಜಿಲ್ಲೆಯವರಾದ ಶಿಲ್ಪಿ ಹೆಬ್ಬಾರ ಮತ್ತವರ ತಂಡದವರಿಗೆ ಈ ದೇವಸ್ಥಾನದ ಕೆಲಸವನ್ನು ಒಪ್ಪಿಸಲಾಗಿದೆ ಎಂದರು.
ಸುಮಾರು ನಾಲ್ಕು ದಶಕಗಳಷ್ಟು ಕಾಲವಾಧಿಯ ಈ ದೇವಸ್ಥಾನವನ್ನು ಪುನರುಜ್ಜೀವನಗೊಳಿಸುವ ಮತ್ತು ಸುಂದರೀಕರಣಗೊಳಿಸ ಬೇಕು ಎನ್ನುವ ಬೇಡಿಕೆ ಭಕ್ತರದಾಗಿತ್ತು. ನಾನು ಮತ್ತು ನನ್ನ ಪತ್ನಿ, ನಮ್ಮ ಕುಟುಂಬವರ್ಗ ಕೂಡ ಈ ದೇವಸ್ಥಾನದ ಪರಮ ಭಕ್ತರಾಗಿದ್ದು, ನಾನು ಎರಡನೇಯ ಸಲ ಶಾಸಕರಾಗಲು ಆಂಜನೇಯ ಸ್ವಾಮಿಯ ಆರ್ಶೀವಾದವೂ ಇದೆ ಎಂದರು.
ಸ್ವಾಮಿಯ ದೇವಸ್ಥಾನವನ್ನು ಪುನರುಜ್ಜೀವನಗೊಳಿಸುವ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಪುಣ್ಯ ಎಂದ ಶಾಸಕರು ಭಕ್ತರ ಸಹಕಾರದೊಂದಿಗೆ ಸುತ್ತೂರಿಗೂ ಮಾದರಿ ಆಗುವಂತಹ ರೀತಿಯಲ್ಲಿಯೇ ಪುನರುಜ್ಜೀವನ ಕೆಲಸವನ್ನು ಮಾಡಿಸುತ್ತೇನೆ ಎಂದರು.
ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾದ ವೈ.ಮಲ್ಲಿಕಾರ್ಜುನ, ನಾಣಿಕೇರಿ ದೈವಸ್ಥರ ಮುಖಂಡರಾದ ಬಾರಿಕರ ಬಾಪೂಜಿ, ಹುಳ್ಳಿ ಮಂಜುನಾಥ,ಮುಖಂಡರಾದ ಬಾದಾಮಿ ಮೃತ್ಯುಂಜಯ, ಕನ್ನಿಹಳ್ಳಿ ಚಂದ್ರಶೇಖರ, ಪುರಸಭಾ ಸದಸ್ಯರಾದ ಬಿಡಿಕೆ ಗಂಗಣ್ಣ, ನಾಣಿಕೇರಿ ದೈವಸ್ಥರಾದ ವಡ್ರಸೋಮಣ್ಣ, ಹುಗ್ಗಿ ಹುಲುಗಪ್ಪ, ಶಾಸಕರ ಆಪ್ತ ಸಹಾಯಕ ಬ್ಯಾಟಿ ನಾಗರಾಜ, ಪವಾಡಿ ಮಂಜುನಾಥ ಸೇರಿದಂತೆ ಹಲವರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ಪೂಜಾರಿ ರಾಮು ಪೌರೋಹಿತ್ಯವಹಿಸಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು