* ಸುನಾಮಿನ್ಯೂಸ್, ಜೂನ್,26
ವಿಜಯನಗರ ಜಿಲ್ಲಾ ಕೇಂದ್ರ ಸ್ಥಾನ ಹೊಸಪೇಟೆ ನಗರದ ವಿಜಯನಗರ ಕಾಲೇಜಿಗೆ ನಟ, ನಿರ್ಮಾಪಕ ಅಜೇಯ ರಾವ್ ಅವರು ಗುರುವಾರ ದಿಢೀರ್ ಭೇಟಿ ನೀಡಿದರು.
ಇತ್ತಿಚಿಗೆ ಬಿಡುಗಡೆ ಆಗಿದ್ದ ಯುದ್ಧಕಾಂಡ-2 ಕನ್ನಡ ಚಲನಚಿತ್ರ ಸಕ್ಸಸ್ ಆಗುವ ಮೂಲಕ ಅಜೇಯ್ ರಾವ್ ಅವರಿಗೆ ಇಂಡಸ್ಟ್ರಿ ಯಲ್ಲಿ ಸಾಕಷ್ಟು ಹೆಸರು ಬರುವಂತೆ ಮಾಡಿತ್ತು. ಯುದ್ಧಕಾಂಡದ ಯಶಸ್ಸು ಬಹುತೇಕ ಮರೆತೇ ಹೋಗಿದ್ದ ಅಜೇಯ್ ರಾವ್ ಅವರನ್ನು ಸಿನಿ ವೀಕ್ಷಕರು ಪುನಃ ನೆನಪು ಮಾಡಿಕೊಳ್ಳುವಂತೆ ಮಾಡಿತು. ಸಿಂಗಲ್ ಸ್ಕ್ರೀನ್ ಜೊತೆಗೆ ಓಟಿಟಿಯಲ್ಲು ಯುದ್ಧಕಾಂಡ ಒಳ್ಳೆಯ ಪ್ರದರ್ಶನ ಕಂಡಿತು.
ಇನ್ನೂ ವಿಜಯನಗರ ಕಾಲೇಜಿಗೆ ಅಜೇಯ್ ರಾವ್ ದಿಢೀರ್ ಭೇಟಿ ನೀಡಿದ್ಯಾಕೇ? ಎನ್ನುವ ಪ್ರಶ್ನೆ ಸಹಜ. ಚಿತ್ರನಟರಾಗುವ ಮುಂಚೆ ಅಜೇಯ್ ರಾವ್ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಹೀಗಾಗಿ ಕಾಲೇಜಿನ ಹಳೇ ವಿದ್ಯಾರ್ಥಿ ಆಗಿರುವ ರಾವ್ ಅವರನ್ನು ಕಾಲೇಜಿಗೆ ಎಳೆದು ತಂದಿದೆ.
ತಾವು ಓದುತ್ತಿರುವ ಸಂಧರ್ಭದಲ್ಲಿನ ವಿಷಯಗಳನ್ನು ರಾವ್ ಈ ವೇಳೆ ಮೆಲುಕು ಹಾಕಿದರು. ತಾವು ಓಡಾಡಿದ ಕಾರಿಡಾರ್ ತುಂಬನೂ ನಡೆದಾಡಿ ವಿದ್ಯಾರ್ಥಿ ಜೀವನವನ್ನು ನೆನಪುಮಾಡಿಕೊಂಡರು. ಹಲವು ಘಟನೆಗಳನ್ನು ಮೆಲುಕು ಹಾಕಿದರು.
ಇದೇ ವೇಳೆ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಚೆನ್ನಾಗಿ ಓದಿ ಪದವಿ ಪಡೆದು, ಯಾವುದಾದರೂ ವಿಷಯದಲ್ಲಿ ಪರಿಣಿತಿ ಪಡೆದು ಉತ್ತಮ ನಾಗರೀಕರಾಗಿ , ಮೊದಲು ನಿಮ್ಮ ಮನೆಯ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ ನಂತರ ಶಾಲೆ ಹಾಗೂ ಕಾಲೇಜಿಗೆ, ಊರಿಗೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಏನಾದರು ಕೊಡುಗೆಯನ್ನು ನೀಡುವಂತವರಾಗಿ ಎಂದರು.
ನೀವು ಜೀವನದಲ್ಲಿ ಏನಾದರು ಆಗಿ, ಆದರೇ ಯಾರಿಗೂ ತೊಂದರೆ ಕೊಡಬೇಡಿ, ಯುವಕ ಯುವತಿಯರು ಯಾರ ಹತ್ತಿರ ಕೂಡ ಜಗಳ ಮಾಡದೆ ಎಲ್ಲರ ಜೊತೆ ಉತ್ತಮ ಭಾಂದವ್ಯ ಇಟ್ಟುಕೊಳ್ಳಿ, ಎಲ್ಲರಿಗೂ ಒಳ್ಳೆಯದನ್ನು ಮಾಡಿ ಎಂದು ವಿಧ್ಯಾರ್ಥಿಗಳಿಗೆ ಅಜೇಯ್ ರಾವ್ ಕಿವಿ ಮಾತು ಹೇಳಿದರು.
ವಿಜಯನಗರ ಕಾಲೇಜು ನನಗೆ ಬಹಳಷ್ಟು ಉತ್ತಮ ವಿದ್ಯಾಭ್ಯಾಸ ನೀಡುವುದರ ಜೊತೆಗೆ ನನಗೆ ಶಿಸ್ತುನ್ನು ಕಲಿಸಿ ಕೊಟ್ಟಿದೆ. ಪ್ರಪಂಚದ ಯಾವುದೇ ದೇಶಕ್ಕೆ ಹೊದರು ಎಲ್ಲಾ ಕ್ಷೇತ್ರಗಳಲ್ಲೂ ವಿಜಯನಗರ ಕಾಲೇಜಿನ ವಿದ್ಯಾರ್ಥಿಗಳು ಸಿಗುತ್ತಾರೆ ಅದು ಹೆಮ್ಮೆಯ ವಿಷಯವಾಗಿದೆ ನಾನು ಕೂಡ ವಿಜಯನಗರ ಕಾಲೇಜ್ ವಿದ್ಯಾರ್ಥಿ ಎಂದು ಗುರುತಿಸಿಕೊಳ್ಳೊದು ಹೆಮ್ಮೆ ಎಂದರು.
ಕಾಲೇಜ್ ಆಡಳಿತ ಮಂಡಳಿ ಯಿಂದ ಹಳೇಯ ವಿದ್ಯಾರ್ಥಿ ಹಾಗೂ ನಟ,ನಿರ್ಮಾಪಕ ಅಜೇಯ್ ರಾವ್ ಅವರನ್ನು ಸನ್ಮಾನಿಸಲಾಯ್ತು. ವಿದ್ಯಾರ್ಥಿಗಳು ಅಜೇಯ್ ಗೆ ಕೈಕುಲುಕಿ, ಜೊತೆಗೆ ಸೆಲ್ಫಿ ಕ್ಲಿಕಿಸಿಕೊಂಡು ಸಂಭ್ರಮಿಸಿದರು.
ವಿಜಯನಗರ ಪದವಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎನ್. ಮಲ್ಲಿಕಾರ್ಜುನ, ಕಾಲೇಜು ಪ್ರಾಂಶುಪಾಲ ಡಾ.ಪ್ರಭುಗೌಡ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮಲ್ಲಿಕಾರ್ಜುನ ಗೌಡ, ಹಳೇಯ ವಿಧ್ಯಾರ್ಥಿಗಳ ಸಂಘದ ಅಧ್ಯಕ್ಷ ಪಿ.ಎನ್. ಶ್ರೀಪಾದ, ಕೋರಿಶೆಟ್ಟ ಲಿಂಗಪ್ಪ, ಗೋಗ್ಗಾ ಚೆನ್ನಬಸಪ್ಪರಾಜ್ , ನಿಂಬಗಲ್ ರಾಮಕೃಷ್ಣ, ಓಪ್ಪತ್ತೆಪ್ಪ, ಮಹಾವೀರ ಜೈನ್, ಕಿರಣ್ ಕುಮಾರ್, ವೀರಭದ್ರ ಸ್ವಾಮಿ, ಸುನೀಲ್ ಮತ್ತಿತರರು ಈ ವೇಳೆ ಹಾಜರಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.