* ಸುನಾಮಿನ್ಯೂಸ್, ಜೂನ್,18
ಇಲ್ಲಿಯ ತನಕ ಈ ಕ್ಷೇತ್ರ ದಿಂದ ಸುಮಾರು ಜನ ಶಾಸಕರಾಗಿರ ಬಹುದು. ಆದರೇ ಗೆದ್ದ, ಕೇವಲ ಎರಡೇ, ಎರಡು ವರ್ಷದಲ್ಲಿ ಇಡೀ ರಾಜ್ಯದ ಜನತೆಯೇ ತಿರುಗಿ ನೋಡುವ ರೀತಿಯಲ್ಲಿಯೇ ಅದ್ಭುತವಾದ ಕೆಲಸ ಮಾಡಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಮಂತ್ರಿ ಸತೀಶ್ ಜಾರಕಿಹೊಳಿ ಅವರು ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ.ಎನ್ಟಿ ಶ್ರೀನಿವಾಸರ ಅವರ ಜನಪರ ಕಾರ್ಯಗಳ ಬಗ್ಗೆ ವ್ಯಕ್ತಪಡಿಸಿದ ಪರಿ ಇದು.
ಮಂಗಳವಾರ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಗ್ರಾಮದ ಕೆಪಿಎಸ್ ಶಾಲಾ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಜರುಗಿದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಸಚಿವರು ಮಾತನಾಡಿದರು.
ಡಾ.ಶ್ರೀನಿವಾಸ ಮಾಡಿರುವ ಕೆಲಸಗಳು ಸರ್ವಜನರು ಮೆಚ್ಚುವಂತಿವೆ. ವೈದ್ಯರಾಗಿ ದಿವಸಕ್ಕೆ ಕನಿಷ್ಠ ಲಕ್ಷರೂಪಾಯಿ ಆದಾಯ ದುಡಿಯುತ್ತೀದ್ರು. ಅದನ್ನು ಬಿಟ್ಟು ನಿಮ್ಮ ಸೇವೆ ಮಾಡಲು ಅವರು ರಾಜಕೀಯಕ್ಕೆ ಬಂದಿದ್ದಾರೆ. ಗೆದ್ದ ಎರಡು ವರ್ಷದಲ್ಲಿ ನಿರೀಕ್ಷೆಗೆ ಮೀರಿ ಕೆಲಸ ಮಾಡಿದ್ದಾರೆ ಎಂದರು.
* ಕೈ ಬೀಡಬೇಡಿ:
ಶಾಲೆ, ರಸ್ತೆ, ನೀರು, ಚೆಕ್ ಡ್ಯಾಂ ಈಗೇ ಸದಾ ಕ್ಷೇತ್ರದ ಅಭಿವೃದ್ಧಿ ಬಗ್ಗೆನೆ ನಿಮ್ಮ ಶಾಸಕರು ಚಿಂತಿಸುತ್ತಾರೆ. ಚುನಾವಣೆಗಳು ಬಂದಾಗ ತೆಲುಗು ಹೀರೊಗಳು ದಿಡೀರ್ ಎಂದು ಪ್ರತ್ಯೇಕ್ಷರಾಗುತ್ತಾರೆ. ಇವರ ಹಿಂದೆ ನೀವು ಹೋಗಬೇಡಿ. ನಿಮ್ಮ ಶಾಸಕ ಶ್ರೀನಿವಾಸ ಕನ್ನಡದ ಡಾಕ್ಟರ್ ರಾಜಕುಮಾರ ಇದ್ದಾಂಗೆ ಸದಾ ನಿಮ್ಮ ಜೊತೆಯಲ್ಲಿಯೇ ಇರುತ್ತಾರೆ ಇವರ ಜೊತೆಗೆ ನೀವಿರ ಬೇಕು. ಅವರನ್ನು ಕೈ ಬೀಡಬೇಡಿ ಎಂದು ಬಳ್ಳಾರಿ ರೆಡ್ಡಿ ಬ್ರದರ್, ಶ್ರೀರಾಮುಲು ಹೆಸರೇಳದೆ ಸಚಿವರು ಟಾಂಗ್ ಕೊಟ್ಟರು.
* ರಸ್ತೆ ಅಭಿವೃದ್ಧಿಗೆ150 ಕೋ ರೂ:
ವರ್ಷಕ್ಕೆ ತಲಾ 50 ಕೋಟಿರೂಪಾಯಿಗಳಂತೆ 150 ಕೋಟಿ ರೂಗಳ ಅನುದಾನ ಕೊಟ್ಟು ಮುಂದಿನ ಮೂರು ವರ್ಷದೊಳಗೆಲ್ಲ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು.
ನನ್ನ ಕ್ಷೇತ್ರ ಹೊರತು ಪಡಿಸಿದರೇ ಈ ಎರಡು ವರ್ಷದಲ್ಲಿ ನನ್ನ ಇಲಾಖೆಯಿಂದ ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ಅನುದಾನ ನೀಡಿರುವುದು ಕೂಡ್ಲಿಗಿ ಕ್ಷೇತ್ರಕ್ಕೆ ಮಾತ್ರ. ಕೊಟ್ಟಿರುವ ಅನುದಾನ ಇಲ್ಲಿ ಸಮರ್ಪಕವಾಗಿ ಸದ್ಭಳಕೆ ಆಗಿದ್ದು, ಗುಣಮಟ್ಟದ ಕೆಲಸಗಳು ಆಗಿರುವುದನ್ನು ನಾನು ನೋಡಿದೆ ಎಂದರು.
* ಕೂಡ್ಲಿಗಿ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್:
ಎರಡೇ ವರ್ಷದಲ್ಲಿ ಈ ಕ್ಷೇತ್ರದಲ್ಲಿ ಜನ ಮೆಚ್ಚುವ ಕೆಲಸಗಳು ಆಗಿವೆ. ನನ್ನ ಇಲಾಖೆ ಜೊತೆಗೆ ಇತರೆ ಇಲಾಖೆಗಳ ಸಚಿವರನ್ನು ಭೇಟಿ ಮಾಡಿ ಮುಂದಿನ ಮೂರು ವರ್ಷದಲ್ಲಿ ಕೂಡ್ಲಿಗಿಯ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದು ಮಂತ್ರಿ ಸತೀಶ್ ಜಾರಕಿಹೊಳಿ ಹೇಳಿದರು.
* ದಿ.ಬೊಮ್ಮಣ್ಣರನ್ನು ನೆನೆದ ಜಾರಕಿಹೊಳಿ:
ಡಾ.ಶ್ರೀನಿವಾಸ ಅವರ ತಂದೆಯವರಾದ ಮಾಜಿಶಾಸಕರಾದ ದಿವಂಗತ ಎನ್ಟಿ ಬೊಮ್ಮಣ್ಣರು ಶಿಕ್ಷಣ ಪ್ರೇಮಿ ಆಗಿದ್ರು. ನರಸಿಂಹಗಿರಿ ವಿದ್ಯಾಸಂಸ್ಥೆ ಕಟ್ಟಿ ಅದರ ಮೂಲಕ ಈ ಕ್ಷೇತ್ರದ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಕಲ್ಪಿಸುವ ಕೆಲಸ ಮಾಡಿದ್ದಾರೆ.
ನಮ್ಮ ಗೋಕಾಕ್ ನಲ್ಲಿ ಶಿಕ್ಷಣ ಕ್ರಾಂತಿಗೂ ಬೊಮ್ಮಣ್ಣರು, ಆಗ ಸಂಸದರಾಗಿದ್ದ ವೆಂಕಟೇಶ ನಾಯಕರು ಕಾರಣರಾದ್ರು ಎಂದು ಸಮಾರಂಭದಲ್ಲಿ ಆಗಲಿದ ನಾಯಕರನ್ನು ಸಚಿವರು ನೆನಪಿಸಿಕೊಂಡರು.
ಕ್ಷೇತ್ರದ ಶಾಸಕರಾದ ಡಾ.ಎನ್ಟಿ ಶ್ರೀನಿವಾಸ, ಹಿರಿಯ ಮುಖಂಡರಾದ ಎನ್ಟಿ ತಮ್ಮಣ್ಣ, ಕರ್ನಾಟಕ ದ್ರಾಕ್ಷಿ ನಿಗಮದ ಅಧ್ಯಕ್ಷ ಡಾ.ಯೋಗೇಶಬಾಬು, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಸಹಿತ ಹಲವರು ಭಾಗವಹಿಸಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು