* ಸುನಾಮಿನ್ಯೂಸ್, ಜೂನ್,19
ನನ್ನ ಕ್ಷೇತ್ರದ ರಸ್ತೆ, ಸೇತುವೆ, ಶಾಲಾಕೊಠಡಿ, ಸರ್ಕಾರಿ ಕಚೇರಿಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ನಾನು ಕಳಿಸುವ ಎಲ್ಲಾ ಪ್ರಸ್ತಾವನೆಗಳಿಗೆ ಪಿಡ್ಲೂಡಿ ಮಿನಿಸ್ಟರ್ ಸತೀಶ್ ಜಾರಕಿಹೊಳಿ ಸಾಹೇಬ್ರು ತಕ್ಷಣ ಸ್ಪಂದಿಸಿ, ಅನುದಾನವನ್ನು ಕ್ಲಿಯರ್ ಮಾಡಿಕೊಡ್ತಾಯಿದ್ದಾರೆ ಎಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಎನ್ಟಿ ಶ್ರೀನಿವಾಸ ಹೇಳಿದ್ದಾರೆ.
ಮಂಗಳವಾರ ಸಂಜೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಗ್ರೌಂಡ್ ನಲ್ಲಿ ಆಯೋಜಿಸಿದ್ದ 41 ಕೋಟಿರೂಗಳ ವೆಚ್ಚದ ವಿವಿಧ ಕಾಮಗಾರಿಗಳ ಭೂಮಿಪೂಜೆಯ ಬೃಹತ್ ಸಮಾರಂಭದ ಅಧ್ಯಕ್ಷತೆವಹಿಸಿ ಶಾಸಕರು ಮಾತನಾಡಿದರು.
ಇವತ್ತು ಕೇವಲ ಎರಡೇ ವರ್ಷದಲ್ಲಿ ಕ್ಷೇತ್ರದಲ್ಲಿ ಬೃಹತ್ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳು ಅಸ್ತಿತ್ವಕ್ಕೆ ಬರುವುದರ ಹಿಂದೆ ಪಿಡ್ಲೂಡಿ ಮಿನಿಸ್ಟರ್ ಅವರ ಸಹಕಾರವೂ ದೊಡ್ಡ ಮಟ್ಟದಲ್ಲಿದೆ ಆಗೇನೆ ನಮ್ಮ ನೆಚ್ಚಿನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ ಹಾಗೂ ಸಚಿವರ ನೆರವುಕೂಡ ಇದ್ದು ಕ್ಷೇತ್ರದ ಜನತೆಯ ಪರವಾಗಿ ಅವರೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನಮ್ಮ ಗುಡೇಕೋಟೆ ಐತಿಹಾಸಿಕ ಸ್ಥಳವಾಗಿದ್ದು ಇಲ್ಲಿನ ಇತಿಹಾಸ ಪ್ರಸಿದ್ಧವಾದ ಕೆರೆಯ ಅಭಿವೃದ್ಧಿ, ಸೇತುವೆ ಹಾಗೂ ರಸ್ತೆ ಅಭಿವೃದ್ಧಿಗೆ 8.5ಕೋಟಿ ಅನುದಾನವನ್ನು ಜಾರಕಿಹೊಳಿ ಸಾಹೇಬ್ರು ಕೊಟ್ಟಿದ್ದಾರೆ. ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು ಶಾಸಕ ಡಾ.ಎನ್ಟಿ ಶ್ರೀನಿವಾಸ.
* ಪ್ರವಾಸಿ ಮಂದಿರಕ್ಕೆ ಬೇಡಿಕೆ:
ಕ್ಷೇತ್ರದಲ್ಲಿ ಸದ್ಧರ್ಮ ಪೀಠ ಉಜಿನಿ, ವೀರವನಿತೆ ಒನಕೆ ಒಬವ್ವರ ತವರು ಐತಿಹಾಸಿಕ ಗುಡೇಕೋಟೆ ಹಾಗು ದೊಡ್ಡ ಹೊಬಳಿ ಕೇಂದ್ರ ಕಾನ ಹೊಸಳ್ಳಿ ಇದ್ದು ಈ ಮೂರು ಸ್ಥಳಗಳಲ್ಲಿ ಪ್ರವಾಸಿ ಮಂದಿರ ಅಗತ್ಯವಿದ್ದು ಅನುದಾನ ನೀಡುವಂತೆ ಸಚಿವರಿಗೆ ಶಾಸಕರು ಬೇಡಿಕೆ ಸಲ್ಲಿಸಿದರು.
* ಬ್ರಿಡ್ಜ್ ಗೆ ಮನವಿ:
ಕ್ಷೇತ್ರದಲ್ಲಿ ಹಳ್ಳಿ ರಸ್ತೆಗಳಿಗೆ ಲಿಂಕ್ ಕೋಡುವ ರಸ್ತೆಗಳು ಹೆಚ್ಚಿವೆ ಇಲ್ಲಿ ಸುಗಮ ಸಂಚಾರಕ್ಕೆ ಕಿರು ಮತ್ತು ಮಧ್ಯಮ ಗಾತ್ರದ ಸೇತುವೆಗಳು ಅಗತ್ಯವಿದೆ. ಸೇತುವೆಗಳು ನಿರ್ಮಾಣಗೊಂಡರೆ ಜನರು ಸುಗಮವಾಗಿ ಸಂಚರಿಸಲು ಅನುಕೂಲವಾಗುತ್ತದೆ ಹೀಗಾಗಿ ನಮಗೆ ಕಿರು,ಮಧ್ಯಮ ಸೇತುವೆಗಳ ನಿರ್ಮಾಣಕ್ಕೆ ಅನುದಾನ ನೀಡುವಂತೆ ಶಾಸಕರು ಮನವಿ ಮಾಡಿಕೊಂಡರು.
ಸಚಿವರ ಪ್ರವಾಸ ಕಾರ್ಯಕ್ರಮ ಕೇವಲ ಒಂದು ದಿನದ ಹಿಂದಷ್ಟೆ ಫಿಕ್ಸ್ ಆಯ್ತು. ಒಂದೇ ದಿನದಲ್ಲಿ ಅದ್ಭುತ ಕಾರ್ಯಕ್ರಮವನ್ನು ಸಂಘಟನೆ ಮಾಡಲಾಗಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಶಾಸಕರು ಸಮಾರಂಭದ ಮೂಲಕ ಧನ್ಯವಾದ ಅರ್ಪಿಸಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಹಿರಿಯ ನಾಯಕ ಎನ್ಟಿ ತಮ್ಮಣ್ಣ, ಕರ್ನಾಟಕ ವೈನ್ ಮತ್ತು ದ್ರಾಕ್ಷಿ ಮಂಡಳಿ ಅಧ್ಯಕ್ಷ ಡಾ.ಯೋಗೀಶ್ ಬಾಬು, ಕೂಡ್ಲಿಗಿ ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.