- ಸುನಾಮಿನ್ಯೂಸ್, ಜೂನ್,25
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ಗುರುಭವನದ ಹತ್ತಿರ ಇರುವ ನಾಣಿಕೇರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ನವೀಕರಣ ಕಾಮಗಾರಿಯ ವ್ಯಾಪ್ತಿ ನೆಲಹಾಸು ನಿಂದ ಮಂಗಳವಾರ ನೂತನ ಗೋಪುರದ ನಿರ್ಮಾಣದ ವರೆಗೂ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡಿತು.
ನೂತನ ಗೋಪುರ ನಿರ್ಮಾಣ ಹಾಗೂ ದೇವಸ್ಥಾನದ ನವೀಕರಣದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ಯಿಂದಲೇ ದೇವಸ್ಥಾನದ ಆವರಣದಲ್ಲಿ ಗಣಪತಿ ಹೋಮ ಸಹಿತ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.
ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್ ಹೋಮ ಪೂಜಾ ಕಾರ್ಯಕ್ಕೆ ಚಾಲನೆ ನೀಡಿ, ಹೋಮ ಸಂಪನ್ನಗೊಳ್ಳುವ ತನಕವೂ ಹಾಜರಿದ್ದು ಕಾಮಗಾರಿ ಕೆಲಸಗಳು ಸುಸೂತ್ರವಾಗಿ ನೇರವೇರಲಿ ಎಂದು ಸರ್ವ ಭಕ್ತರ ಪರವಾಗಿ ವಿಘ್ನೇಶ್ವರನಲ್ಲಿ ಕೈ ಮುಗಿದು ಪ್ರಾರ್ಥಿಸಿಕೊಂಡರು.
ನಂತರ ದೇವಸ್ಥಾನದ ನವೀಕರಣ ಹಾಗೂ ನೂತನ ಗೋಪುರ ನಿರ್ಮಾಣ ಕಾಮಗಾರಿಗಳಿಗೆ ಶಾಸಕರು ಭೂಮಿಪೂಜೆ ನೇರವೇರಿಸಿದರು. ಈಗಾಗಲೇ, ಕಳೆದವಾರ ನೆಲಹಾಸು ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಆ ಕೆಲಸ ಬಿರುಸಾಗಿ ನಡೆದಿದೆ.
*50 ಟನ್ ಕಲ್ಲು:
ಇದೇ ವೇಳೆ ಗೋಪುರ ನಿರ್ಮಾಣ ಹಾಗೂ ದೇವಸ್ಥಾನದ ನವೀಕರಣಕ್ಕಾಗಿ ದೊಡ್ಡ ಬಳಾಪುರ ದಿಂದ ತರಿಸಲಾದ ಕಲ್ಲುಗಳಿಗೆ ಶಾಸಕರು ಪೂಜೆ ನೇರವೇರಿಸಿದರು. ಆರಂಭಿಕವಾಗಿ 50 ಟನ್ ಗೂ ಅಧಿಕ ತೂಕದ ಕಲ್ಲುಗಳನ್ನು ತರಿಸಲಾಗಿದ್ದು ಅಗತ್ಯವಾದ ಕಲ್ಲುಗಳನ್ನು ಹಂತ,ಹಂತವಾಗಿ ತರಿಸಲಾಗುವುದು ಎಂದರು.
ಆ ಸ್ವಾಮಿಯ ಸಂಕಲ್ಪದಂತೆ ಎಲ್ಲಾ ನಡೆಯುತ್ತಿದೆ. ಮೊದಲು ನೆಲಹಾಸು ನವೀಕರಣ ಎಂದು ಆರಂಭಿಸಿದ ಕೆಲಸ ಈಗ ಇಡೀ ದೇವಸ್ಥಾನ ನವೀಕರಣ ಹಾಗೂ ನೂತನವಾಗಿ ಗೋಪುರ ನಿರ್ಮಾಣದ ಹಂತಕ್ಕೆ ಬಂದು ನಿಂತಿದೆ. ಎಲ್ಲಾ ಆ ಸ್ವಾಮಿಯ ಕೃಪೆಯೇ ಹೊರತು ನಮದೇನು ಇಲ್ಲಾ. ಆತ ಮಾಡಿಸಿಕೊಳ್ಳುತ್ತಿದ್ದಾನೆ. ನಾವು ಆತನ ಆಪ್ಪಣೆಯಂತೆ ಕೆಲಸ ಮಾಡೋದಷ್ಟೆ ನಮ್ಮ ಕೆಲಸ ಎಂದ ಶಾಸಕರು, ಸ್ವಾಮಿ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿರೋದು ನನ್ನ ಭಾಗ್ಯ ಎಂದರು ನೇಮಿರಾಜನಾಯ್ಕ್.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಬಾದಾಮಿ ಮೃತ್ಯುಂಜಯ, ನಾಣಿಕೇರಿ ದೈವಸ್ಥರ ಮುಖಂಡರಾದ ಬಾರಿಕರ ಬಾಪೂಜಿ, ಹುಳ್ಳಿ ಮಂಜುನಾಥ, ಸರ್ದಾರ ಗೋವಿಂದಪ್ಪ, ದಾನಿಗಳಾದ ಅನ್ವೇರಿ ಶ್ರೀನಿವಾಸ, ಗುತ್ತಿಗೆದಾರ ಶ್ರೀಶೈಲ, ಶಾಸಕರ ಆಪ್ತ ಸಹಾಯಕ ಬ್ಯಾಟಿ ನಾಗರಾಜ, ಕಿತ್ತನೂರು ಮಾರುತಿ, ದೇವಸ್ಥಾನ ನಿರ್ಮಾಣ ಶಿಲ್ಪಿಗಳಾದ ಹೆಬ್ಬಾರ್ ಸಹಿತ ಹಲವರು ಭಾಗವಹಿಸಿದ್ದರು. ಕುರದಗಡ್ಡಿ ಭಟ್ಟರು ಹಾಗೂ ನಾಣಿಕೇರಿ ಶ್ರೀ ಅಂಜನೇಯಸ್ವಾಮಿ ಪೂಜಾರಿ ರಾಮು ಪೌರೋಹಿತ್ಯದ ಉಸ್ತುವಾರಿ ವಹಿಸಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.