Welcome to sunamipatrike   Click to listen highlighted text! Welcome to sunamipatrike
Wednesday, November 20, 2024
HomeUncategorizedನಾಳೀಂದ 'ಲೋಹಾದ್ರಿ' ಕ್ಷೇತ್ರದಲ್ಲಿ ' ಸಿದ್ದು ಘರ್ಜನೆ' ಮೊಳಗಲಿದೆ!

ನಾಳೀಂದ ‘ಲೋಹಾದ್ರಿ’ ಕ್ಷೇತ್ರದಲ್ಲಿ ‘ ಸಿದ್ದು ಘರ್ಜನೆ’ ಮೊಳಗಲಿದೆ!

  • ಹುಳ್ಳಿಪ್ರಕಾಶ, ಸಂಪಾದಕರು
  • ಸುನಾಮಿ ನ್ಯೂಸ್

* ಸಂಡೂರು, ನ, 6

ನಾಳೆ ಯಿಂದ (ನ,6,7) ಎರಡು ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಚುನಾವಣೆ ಜರುಗುತ್ತೀರುವ
ಸಂಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣ ತುಕಾರಾಂ ಪರವಾಗಿ ಅಬ್ಬರದ ಪ್ರಚಾರ ಮಾಡಲಿದ್ದಾರೆ.

ರೋಡ್ ಶೋ, ಕಾರ್ನರ್ ಮಿಟಿಂಗ್ ಸೇರಿದಂತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರದ ಧೂಳೇಬ್ಬಿಸುವ ಮೂಲಕ ಎದುರಾಳಿ ಬಿಜೆಪಿಯವರಿಗೆ ಮೈ ನಡುಕ ಹೆಚ್ಚಿಸಿ, ಇತ್ತ ಅನ್ನಪೂರ್ಣ ತುಕಾರಾಂ ಹಾಗು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉಪಚುನಾವಣೆಯಲ್ಲಿ ಗೆಲುವಿನ ಉಮೇದಿಯನ್ನು ಹೆಚ್ಚಿಸಲಿದ್ದಾರೆ.

ಸಿಎಂ ಅವರ ಕಚೇರಿ ಯಿಂದ ಪ್ರಕಟಣೆಗೊಂಡಿರುವ ಟೂರ್ ಪ್ರೋಗ್ರಾಂ ಪ್ರಕಾರ, ಗುರುವಾರ ಬೆಳಿಗ್ಗೆ 9.30ಕ್ಕೆ ಬೆಂಗಳೂರಿನ ಹೆಚ್ ಎ ಎಲ್ ವಿಮಾನ ನಿಲ್ದಾಣ ದಿಂದ ವಿಶೇಷ ವಿಮಾನದ ಹೇರಿ ಬರುವ ಸಿಎಂ ತೊರಣಗಲ್ಲಿನ ಜಿಂದಾಲ್ ಏರ್ ಸ್ಟ್ರಿಪ್ ಗೆ ಬೆಳಿಗ್ಗೆ 10.20ಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಎರಡು ದಿನಗಳ ಕಾಲ ವಾಸ್ತವ್ಯ ಸಿಎಂ ವಾಸ್ತವ್ಯ ಹೂಡಲಿದ್ದಾರೆ.

ಈ ಎರಡು ದಿನದಲ್ಲಿ ಸುಮಾರು ಹದಿನೈದು ಗ್ರಾಪಂ ವ್ಯಾಪ್ತಿಯಲ್ಲಿ ಪಕ್ಷದ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಪರವಾಗಿ ಸಿಎಂ ಬಿರುಸಿನ ಮತಯಾಚನೆ ಮಾಡುವ ಮೂಲಕ ಚುನಾವಣಾ ಅಖಾಡದಲ್ಲಿ ಧೂಳೇಬ್ಬಿಸಲಿದ್ದಾರೆ.

ಸಂಡೂರಿನ ಜೊತೆಯಲ್ಲಿ ಉಪ ಸಮರ ಎದುರಿಸುತ್ತೀರುವ ಶಿಗ್ಗಾಂವ ಹಾಗು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ಮಾಡುವ ಮೂಲಕ ಅಖಾಡದಲ್ಲಿ ಎದುರಾಳಿ ಅಭ್ಯರ್ಥಿಗಳ ಎದುರು ಭರ್ಜರಿ ಹೋರಾಟ ಮಾಡುವ ಮನೋಸ್ಥೈರ್ಯವನ್ನು ಸಿಎಂ ಹೆಚ್ಚಿಸಿ ಬಂದಿದ್ದಾರೆ.

ಈಗ ಗುರುವಾರ, ಶುಕ್ರವಾರ ಎರಡು ದಿನ ಎಡಬಿಡದೇ ಲೋಹಾದ್ರಿ ನಾಡಿನಲ್ಲಿ ಮತಯಾಚನೆ ಮಾಡಿ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ಭದ್ರತೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಸಾಧ್ಯತೆ ಇದೆ.

ಏಕೆಂದರೆ, ಇಷ್ಟು ದಿನ ಒಂದು ಲೆಕ್ಕ ಇನ್ನೇರೆಡು ದಿನ ಸಿದ್ದು ಅಬ್ಬರದಲ್ಲಿ ಕೊಚ್ಚಿಹೋಗಲಿದೆ ಎದುರಾಳಿ ಹವಾ! ಎನ್ನುವ ಮಾತುಗಳು ಕಾಂಗ್ರೆಸ್ ಪಾಳೆಯದಲ್ಲಿ ಜೋರಾಗಿದೆ.

ಇನ್ನೂ, ಬೈ ಎಲೇಕ್ಷನ್ ಅನೌನ್ಸ್ ಆಗಿ, ನಾಮ ಪತ್ರ ಸಲ್ಲಿಕೆ ಕೊನೆಗೊಂಡು, ಬಹಿರಂಗ ಪ್ರಚಾರ ಶುರುವಾಗಿ ವಾರ ಕಳೆದ ಮೇಲೆ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಸಿದ್ದು ಆಗಮಿಸುತ್ತಿದ್ದು, ಇದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಆನೆ ಬಲ ತಂದುಕೊಡಲಿದೆ.

ಇತ್ತ ಸಿಎಂ ಆಗಮನ ಕ್ಷೇತ್ರದಲ್ಲಿ ಪಕ್ಷದ ಪ್ರಚಾರದ ಭರಾಟೆಗೂ ಇಂಬು ಕೊಡಲಿದೆ. ಜೊತೆಗೆ ಸಣ್ಣ,ಪುಟ್ಟ ಅಸಮಾಧಾನಗಳಿಗೂ ಬ್ರೇಕ್ ಹಾಕಲಿದೆ. ಉಪ ಸಮರದ ಜವಾಬ್ದಾರಿ ಹೊತ್ತವರಲ್ಲಿ ಇನ್ನಷ್ಟು ವೇಗ ಮೂಡಿಸಲಿದೆ. ಸಿಎಂ ಸಿದ್ದರಾಮಯ್ಯ ಅವರ ಆಗಮನ ಒಟ್ಟಾರೆ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರಲ್ಲಿ ನವಚೇತನ ಮೂಡಿಸಿ, ಗೆಲುವಿನ ಹೋರಾಟದ ಕಸುವನ್ನು ಧೃಡಗೊಳಿಸಲಿದೆ.

  • ಹುಳ್ಳಿಪ್ರಕಾಶ, ಸಂಪಾದಕರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!