- ಹುಳ್ಳಿಪ್ರಕಾಶ, ಸಂಪಾದಕರು
- ಸುನಾಮಿನ್ಯೂಸ್
* ಹೊಸಪೇಟೆ (ವಿಜಯನಗರ), ನ,18
ಸೋಮವಾರ ಬೆಳಿಗ್ಗೆ ನಗರದ ರೈಲ್ವೆ ನಿಲ್ದಾಣದ ಮಾರ್ಗದಲ್ಲಿರುವ ಕನಕವೃತ್ತದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಆಚರಣೆಯಲ್ಲಿ ವಿಜಯನಗರ ಕ್ಷೇತ್ರದ ಶಾಸಕರಾದ ಹೆಚ್.ಆರ್.ಗವಿಯಪ್ಪ ‘ಡೊಳ್ಳು’ ಬಡಿಯುವ ಮೂಲಕ ಗಮನ ಸೆಳೆದರು.
ಕನಕವೃತ್ತದಲ್ಲಿ ಶಾಸಕರು ಡೊಳ್ಳು ಬಾರಿಸುತ್ತಿದ್ದನ್ನು ಆ ಮಾರ್ಗದಲ್ಲಿ ಹಾದು ಹೋಗುತ್ತಿದ್ದ ಸಾರ್ವಜನಿಕರು ಕ್ಷಣಕಾಲ ನಿಂತು ಶಾಸಕರ ಡೊಳ್ಳು ವಾದನವನ್ನು ಅಲಿಸಿದರು.
ಜಯಂತಿಗೆ ಆಗಮಿಸಿದ ಶಾಸಕರು, ವೃತ್ತದ ಬಳಿ ಸಮವಸ್ತ್ರಧಾರಿಯಾಗಿ ಶಿಸ್ತುಬದ್ಧವಾಗಿ ನಿಂತಿದ್ದ ಡೊಳ್ಳುವಾದನ ಕಲಾವಿದರ ಬಳಿ ಹೋಗಿ ಅವರ ಯೋಗ,ಕ್ಷೇಮ ವಿಚಾರಿಸಿದರು. ಆ ವೇಳೆ ಕಲಾವಿದರೊಬ್ಬರು ಶಾಸಕರಿಗೆ ಡೊಳ್ಳು ವಾದನ ಮಾಡಲು ಹೇಳಿದರು.
ತಕ್ಷಣ ಆ ಕಲಾವಿದನ ಕೈಯಿಂದ ಹೆಗಲಿಗೆ ಡೊಳ್ಳನ್ನು ಏರಿಸಿಕೊಂಡ ಶಾಸಕ ಗವಿಯಪ್ಪರು ಡೊಳ್ಳನ್ನು ಬಾರಿಸಲಾರಂಭಿಸಿದರು. ನೆರೆದಿದ್ದ ಸರ್ಕಾರಿ ಅಧಿಕಾರಿಗಳು, ಹಾಲುಮತ ಸಮಾಜದ ಬಂಧುಗಳು, ಸಾರ್ವಜನಿಕರು ಜೋರಾಗಿ ಚಪ್ಪಾಳೆ ತಟ್ಟಿ, ಶಿಳ್ಳೆಹೊಡೆದು ಶಾಸಕರನ್ನು ಪ್ರೋತ್ಸಾಹಿಸಿದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್