- ಹುಳ್ಳಿಪ್ರಕಾಶ, ಸಂಪಾದಕರು
- ಸುನಾಮಿನ್ಯೂಸ್
* ಹೊಸಪೇಟೆ (ವಿಜಯನಗರ), ನ,18
ಸಮಾನತೆ ಮತ್ತು ನೈತಿಕತೆ ಯಿಂದ ಕೂಡಿದ ಸಮಾಜವನ್ನು ಕಟ್ಟಿದಾಗ ಮಾತ್ರವೇ ಮಹಾನದಾರ್ಶನಿಕರಾದ ಕನಕದಾಸರು ಕಂಡಿದ್ದ ಸಮಬಾಳು, ಸಮಪಾಲು ತತ್ವಕ್ಕೆ ಗೌರವ ಸಿಕ್ಕಾಂತಾಗುತ್ತದೆ ಎಂದು ವಿಜಯನಗರ ಕ್ಷೇತ್ರದ ಶಾಸಕರಾದ ಹೆಚ್.ಆರ್.ಗವಿಯಪ್ಪ ಹೇಳಿದ್ದಾರೆ.
ಸೋಮವಾರ ಬೆಳಿಗ್ಗೆ ಕನಕ ಜಯಂತಿ ನಿಮಿತ್ತ ನಗರದ ರೈಲ್ವೆ ನಿಲ್ದಾಣದ ಮಾರ್ಗದಲ್ಲಿರುವ ಕನಕವೃತ್ತದಲ್ಲಿರುವ ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಭಕ್ತಿಯಿಂದ ನಮಿಸಿ ನೆರೆದಿದ್ದವರನ್ನುದ್ದೇಶಿಸಿ ಶಾಸಕರು ಮಾತನಾಡಿದರು
ಕನಕರು, ಸರ್ವರಿಗೂ ಸಮಬಾಳು, ಸಮಪಾಲು ತತ್ವದ ಬಹುದೊಡ್ಡ ಪ್ರತಿಪಾದಕರಾಗಿದ್ದರು. ಕನಕದಾಸರ ಜೀವನಕ್ರಮ ಜಗತ್ತಿನ ಇಡೀ ಮಾನವರ ಬದುಕಿಗೆ ಸರ್ವಕಾಲಕ್ಕೂ ಬಹುದೊಡ್ಡ ಮಾರ್ಗದರ್ಶಿ ಆಗಿದೆ. ಇಂತಹ ಮಹಾನಚೇತನ ನಮ್ಮ ಕರುನಾಡಿನಲ್ಲಿ ಉದಯಿಸಿದ್ದು ನಮ್ಮ ಹೆಮ್ಮೆ ಎಂದು ಶಾಸಕ ಗವಿಯಪ್ಪ ಹರ್ಷ ವ್ಯಕ್ತಪಡಿಸಿದರು.
ಅಡಂಬರವಿಲ್ಲದ ಸರಳ ಬದುಕಿನ ಸಾರವನ್ನು ಸಮಾಜದಲ್ಲಿ ಬಿತ್ತರಿಸುವ ಮೂಲಕ ಸಮ,ಸಮಾಜದ ಪರಿಕಲ್ಪನೆಯನ್ನು ಆ ಕಾಲದಲ್ಲಿಯೇ ಕನಕರು ಕಂಡಿದ್ದರು ಎಂದು ಶಾಸಕ ಗವಿಯಪ್ಪ ಕನಕರನ್ನು ಸ್ಮರಿಸಿಕೊಂಡರು.
ಕನಕದಾಸರ ಆದರ್ಶಗಳು, ಸಂದೇಶಗಳನ್ನು ಸಮಾಜದಲ್ಲಿ ಹೆಚ್ಚೆಚ್ಚು ಪ್ರಸಾರಗೊಳಿಸುವ ಮೂಲಕ ಇಂತಹ ಮಹಾನದಾರ್ಶನಿಕರನ್ನು ಜನರ ನಡುವೆ ಜೀವಂತವಾಗಿಡುವಂತಹ ಕೆಲಸ ಮಾಡುವುದು ನಮ್ಮೇಲ್ಲರ ಹೊಣೆಯು ಹೌದು, ಜವಾಬ್ದಾರಿಯನ್ನು ಕೂಡ ಎಂದರು.
ಇದೇ ವೇಳೆ ಸ್ಥಳೀಯರು ಕನಕದಾಸರ ಕೀರ್ತನೆಗಳನ್ನು ಹಾಡಿದರು. ಡೌಳ್ಳು ಕಲಾವಿದರು ಪ್ರದರ್ಶನ ನೀಡಿದರು. ಆಗೇನೆ ಕನಕದಾಸರ ಸಾಹಿತ್ಯದ ಗುಣಗಾನ ಸಹ ನಡೆಯಿತು.
ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಹಾಲುಮತ ಸಮಾಜದ ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ರಾಮಚಂದ್ರಗೌಡ ಸೇರಿದಂತೆ ಹಾಲುಮತಸಮುದಾಯ ಇನ್ನಿತರೆ ಮುಖಂಡರುಗಳು ಭಾಗವಹಿಸಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು
.