*ಸುನಾಮಿ ನ್ಯೂಸ್
*ಹಗರಿಬೊಮ್ಮನಹಳ್ಳಿ, ನವೆಂಬರ್,1
ಕನ್ನಡತನ ಎಲ್ಲರಲ್ಲಿ ಬೆಳೆಯಬೇಕು, ತಾಯಿನಾಡು, ನುಡಿ,ನೆಲ, ಕನ್ನಡ ಸಾಹಿತ್ಯ, ಸಂಸ್ಕೃತಿ, ಈ ನೆಲದ ಪರಂಪರೆಯನ್ನು ಗೌರವಿಸಿ, ಅದರ ಉನ್ನತಿಗೆ ಶ್ರಮಿಸುವುದು ಪ್ರತಿಯೋಬ್ಬ ಕನ್ನಡಿಗರ ಅದ್ಯಕರ್ತವ್ಯವಾಗಿದೆ ಎಂದು ಹಿರಿಯ ಪತ್ರಕರ್ತರಾದ ಹುಳ್ಳಿಪ್ರಕಾಶ ಹೇಳಿದ್ದಾರೆ.
ಶುಕ್ರವಾರ ಬೆಳಿಗ್ಗೆ ಪಟ್ಟಣದ ರಾಮನಗರದಲ್ಲಿ ಶ್ರೀ ಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ) ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಯಾವುದೇ ಸಮಯ, ಸಂದರ್ಭವೇ ಆಗಿರಲಿ ಕನ್ನಡ ಮಾತನಾಡಲು ಯಾವುದೇ ಅಂಜಿಕೆ, ಅಳುಕು ನಮ್ಮಲ್ಲಿರ ಬಾರದು. ಮುಲಾಜಿಕೆ ಇಲ್ಲದೆ ನಮ್ಮ ತಾಯಿ ಭಾಷೆಯನ್ನು ಮಾತನಾಡಿದಾಗ, ಮಾತೃಭಾಷೆಯಲ್ಲಿಯೇ ಹೆಚ್ಚೆಚ್ಚು ವ್ಯವಹಾರಿಸಿದಾಗ ಮಾತ್ರವೇ ಕನ್ನಡ ಉಳಿದು, ಬೆಳೆಯಲು ಸಾಧ್ಯವಿದೆ ಎಂದರು.
ಕರ್ನಾಟಕದಲ್ಲಿ ಕನ್ನಡವೇ ಯಾವತ್ತೂ ಆಗ್ರಸ್ಥಾನಿಯಲ್ಲಿರಬೇಕು. ಆದರೇ ನಮ್ಮನಾಳುತ್ತಾ ಬಂದಿರುವ ಸರ್ಕಾರಗಳು ಕನ್ನಡಕ್ಕೆ ಸಿಗಬೇಕಾದ ಆಗ್ರಸ್ಥಾನವನ್ನು ಕಲ್ಪಿಸಿಕೊಡುವಲ್ಲಿ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿಲ್ಲ ಈ ಕಾರಣಕ್ಕೇನೆ ಕನ್ನಡ ಮಾಧ್ಯಮದ ಶಾಲೆಗಳು ಅವನತಿಯತ್ತ ಮುಖ ಮಾಡಿ ನಿಲ್ಲುವಂತಾಗಿದೆ ಎಂದು ಶ್ರೀ ಮಾರುತಿ ಸ್ಪೋರ್ಟ್ಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯು ಆಗಿರುವ ಹುಳ್ಳಿಪ್ರಕಾಶ ರವರು ಕನ್ನಡದಕಡೆಗೆ ಸರ್ಕಾರಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕ್ಲಬ್ ನ ಅಧ್ಯಕ್ಷರಾದ ಹೆಚ್.ಪಿ.ಶಿವಶಂಕರಗೌಡ, ಹಿರಿಯ ಉಪಾಧ್ಯಕ್ಷರಾದ ಬಾರಿಕರ ಚಂದ್ರು, ಸಹ ಕಾರ್ಯದರ್ಶಿ ಜಿಎಂ.ಶಂಕರ, ಹಿರಿಯ ಸದಸ್ಯರಾದ ಪ್ಲಂಬರ್ ಮಾರುತಿ, ಗುರುಭವನ ವಿರೇಶ, ರಾಚಣ್ಣರ ರಾಘು, ಬಿ.ಕೋಟಿ, ಬಿ.ಸಂದೀಪ್, ನೂರಿ, ಮ್ಯಾದಾರ ಭರ್ಮಜ್ಜ, ಡ್ರೈವರ್ ಲೋಕಪ್ಪ, ಛತ್ರದಳ್ಳಿ ನಾಗರಾಜ, ಅಂಬಾಡಿ ಅನುಪ್, ಮಡಿವಾಳರ ಯಮನೂರಿ, ಸರ್ದಾರ ಕುಮಾರ, ಬಿ.ಶಿವು, ಹಿರಿಯರಾದ ಗುರುಭವನ ಮಲ್ಲಪ್ಪ, ಬಾರಿಕರ ಮಲ್ಲಪ್ಪ ಸೇರಿದಂತೆ ಹಲವರು ರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು