- ಹುಳ್ಳಿಪ್ರಕಾಶ, ಸಂಪಾದಕರು
- ಸುನಾಮಿ ನ್ಯೂಸ್,
*ಹಗರಿಬೊಮ್ಮನಹಳ್ಳಿ ಅ,28
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಗರಿಬೊಮ್ಮನಹಳ್ಳಿ ತಾಲೂಕ ಘಟಕದ ನಾಲ್ಕು ವಿವಿಧ ಕ್ಷೇತ್ರಗಳ ಎಂಟು ನಿರ್ದೇಶಕ ಸ್ಥಾನಗಳಿಗೆ ಸೋಮವಾರ ಮುಂಜಾನೆ ಯಿಂದ ಪಟ್ಟಣದ ರಾಮನಗರದ ಗುರುಭವನದಲ್ಲಿ ಮತದಾನ ಆರಂಭಗೊಂಡಿದೆ.
ಈ ಚುನಾವಣೆಯ ಮತದಾನಕ್ಕಾಗಿ ಪಟ್ಟಣದ ರಾಮನಗರದ ಗುರುಭವನದಲ್ಲಿ ನಾಲ್ಕು ಮತಕೇಂದ್ರಗಳನ್ನು ಸ್ಥಾಪಿಸಿ, ಸುಗಮ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಿದ್ದು, ಮತದಾರರಾದ ಸರ್ಕಾರಿ ನೌಕರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದ ದೃಶ್ಯ ಕಂಡು ಬಂತು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಲ್ಲೇಶ ಬೇವೂರ್, ಕ್ಷೇತ್ರ ಸಂಪನ್ಮೂಲ ಕೇಂದ್ರ(ಬಿಆರ್ ಸಿ) ಸಂಜೋಕರಾದ ಪ್ರಭಾಕರ ರವರು ಮತಗಟ್ಟೆಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡಿದರು. ಚುನಾವಣಾಧಿಕಾರಿ ಕೊಟ್ರದೇವರು ಇವರಿಗೆ ಸಾಥ್ ನೀಡಿದರು. ಪಿಎಸ್ಐ ಬಸವರಾಜ ಅಡವಿಬಾವಿ ಅವರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.
ಪ್ರಾಥಮಿಕ ಶಾಲಾ ವಿಭಾಗ ದಿಂದ ನಾಲ್ಕು, ಪ್ರೌಢಶಾಲಾ ಶಿಕ್ಷಕರ ವಿಭಾಗ ದಿಂದ ಎರಡು, ಪದವಿ ಪೂರ್ವ ಮತ್ತು ಪದವಿ ಕಾಲೇಜು ಸೇರಿ ಒಂದು. ಅದೇರೀತಿ ಸಮಾಜಕಲ್ಯಾಣ, ಅಲ್ಪಸಂಖ್ಯಾತ, ಹಿಂದುಳಿವರ್ಗದ ಇಲಾಖೆ ಸಂಯೋಜಿಸಿದಂತೆ ಒಂದು ಈಗೇ ನಾಲ್ಕು ಕ್ಷೇತ್ರಗಳಿಂದ ಎಂಟು ನಿರ್ದೇಶಕ ಹುದ್ದೆಗೆ ಸೋಮವಾರ ಚುನಾವಣೆ ಜರುಗಿತು.
ಅದರಲ್ಲೂ, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಆರು ನಿರ್ದೇಶಕ ಹುದ್ದೆಗಳ ಆಯ್ಕೆಗೆ ಜರುಗಿದ ಮತದಾನ ಅತ್ಯಂತ ಬಿರುಸಿನಿಂದ ಕೂಡಿತ್ತು. ಮತದಾರರನ್ನು ಓಲೈಸಲು ಅಭ್ಯರ್ಥಿಗಳು, ಅವರ ಪರ ಇರುವ ಬೆಂಬಲಿಗ ಶಿಕ್ಷಕರು ಹೆಚ್ಚು ಶ್ರಮವಹಿಸುತ್ತಿದ್ದ ದೃಶ್ಯ ಪಂಚಾಯ್ತಿ, ಪುರಸಭೆಯ ಚುನಾವಣೆಯ ಮತದಾನವನ್ನು ನೆನಪಿಸಿತು.
.