* ಸುನಾಮಿನ್ಯೂಸ್, ಜೂನ್,28
ಕನ್ನಡದ ಪ್ರಮುಖ ದಿನಪತ್ರಿಕೆ ‘ಪ್ರಜಾವಾಣಿ’ ಪತ್ರಿಕೆಯ ಮೂರನೇಯ ಆವೃತ್ತಿಯ ಕನ್ನಡ ‘ಸಿನಿ ಸನ್ಮಾನ’ದಲ್ಲಿ ಗೊಲ್ಡನ್ ಸ್ಟಾರ್ ಗಣೇಶ ನಟನೆಯ ‘ ಕೃಷ್ಣಂ ಪ್ರಣಯ ಸಖಿ’ ಚಿತ್ರ ಪ್ರಶಸ್ತಿಗಳ ಸೂರೆಗೈದಿದೆ.
ಅತ್ತುತಮ ಚಿತ್ರ, ಅತ್ತುತಮ ಸಂಗೀತಾ ನಿರ್ದೇಶನ, ಅತ್ತುತಮ ಹಿನ್ನಲೆಗಾಯಕ, ಅತ್ತುತಮ ನೃತ್ಯ ನಿರ್ದೇಶನ, ಅತ್ತುತಮ ಗೀತಾ ಸಾಹಿತ್ಯ ವಿಭಾಗದಲ್ಲಿ ಕೃಷ್ಣಂ ಪ್ರಣಯ ಸಖಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದರ ಜೊತೆಗೆ ಜನಮೆಚ್ಚಿದ ಚಿತ್ರಗೀತೆ ವಿಭಾಗದಲ್ಲೂ ಸಖಿಯ ‘ದ್ವಾಪರ, ದ್ವಾಪರ’ ಗೀತೆ ಎಲ್ಲರನ್ನೂ ಹಿಂದಿಕ್ಕಿದೆ.
‘ಕೃಷ್ಣಂ ಪ್ರಣಯ ಸಖಿ’ ಯನ್ನು ಗೆಲ್ಲಿಸಿದ್ದೆ ಅದರ ಇಂಪಾದ ಸಂಗೀತಾ. ಈ ಚಿತ್ರಕ್ಕೆ ಸಂಗೀತಾ ನಿರ್ದೇಶನ ಮಾಡಿದ್ದ ಅರ್ಜುನ ಜನ್ಯ ಅತ್ತುತಮ ಸಂಗೀತಾ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾದರೇ ಇದೇ ಚಿತ್ರದಲ್ಲಿ ಪಂಜಾಬಿ ಆದರೂ ‘ದ್ವಾಪರ,ದ್ವಾಪರ’ದ ಹಾಡಿನ ಮೂಲಕ ಎಲ್ಲರನ್ನು ತಲೆದೂಗಿಸಿರುವ ಗಾಯಕ ಜಸ್ಕರಣ ಸಿಂಗ್ ಅವರ ಧ್ವನಿಗೆ ಅತ್ತುತಮ ಹಿನ್ನೆಲೆ ಗಾಯಕ ಪ್ರಶಸ್ತಿ ಒಲಿದು ಬಂದಿದೆ.
ಇನ್ನೂ ಮಗುವಿನಿಂದ ಹಿಡಿದು ಮುದುಕರ ವರೆಗೂ ಎದ್ದೇದ್ದು ಕುಣಿಸಿದ್ದ ಕೃಷ್ಣಂ ಪ್ರಣಯ ಸಖಿಯ ‘ದ್ವಾಪರ,ದ್ವಾಪರ’ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದ ಶೇಖರ್ ಮಾಸ್ಟರ್ ಗೆ ಬೆಸ್ಟ್ ಕೋರಿಯೋಗ್ರಾಫಿ ಅವಾರ್ಡ್ ಸಿಕ್ಕಿದೆ.
‘ದ್ವಾಪರ,ದ್ವಾಪರ’ ಹಾಡಿ ನಿಂದಾಗಿ ಜಸ್ಕರಣ ಸಿಂಗ್ ಕರುನಾಡು ಸಹಿತ ವಿಶ್ವ ವ್ಯಾಪಿ ನೆಲಸಿರುವ ಕನ್ನಡಿಗರ ಹೃದಯಕ್ಕೆ ಲಗ್ಗೆ ಇಟ್ಟರು. ಈ ಹಾಡಿಗೆ ಸಾಹಿತ್ಯ ರಚಿಸಿದ್ದ ವಿ.ನಾಗೇಂದ್ರ ಪ್ರಸಾದ್ ಅವರ ಕೊರಳನ್ನು ಅತ್ತುತಮ ಗೀತ ಸಾಹಿತ್ಯ ಪ್ರಶಸ್ತಿ ಅಲಂಕಾರಿಸಿದೆ.
ಜನಮೆಚ್ಚಿದ ಚಿತ್ರ ಗೀತೆಯಲ್ಲೂ ‘ದ್ವಾಪರ,ದ್ವಾಪರ’ದ ಆರ್ಭಟ ಮುಂದುವರೆದಿದ್ದು ಅಲ್ಲೂ ದ್ವಾಪರ ಪ್ರಶಸ್ತಿ ಗಿಟ್ಟಿಸುವ ಮೂಲಕ ‘ಪ್ರಜಾವಾಣಿ’ ಮೂರನೇಯ ಆವೃತ್ತಿಯ ಸಿನಿ ಸನ್ಮಾನದ ಯಾತ್ರೆಯಲ್ಲಿ ವಿಶೇಷ ದಾಖಲೆ ಮೆರೆದಿದೆ.
‘ಭೀಮ’ ಚಿತ್ರದ ಅಭಿನಯಕ್ಕಾಗಿ ದುನಿಯಾ ವಿಜಯ್ ಅತ್ತುತಮ ನಟ ಹಾಗೂ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ನಟನೆಗೆ ಅಂಕಿತ್ ಅಮರ್ ಅತ್ತುತಮ ನಟಿ. ಪೋಷಕ ವಿಭಾಗದಲ್ಲಿ ನಟ ಗೋಪಾಲಕೃಷ್ಣ ದೇಶಪಾಂಡೆ( ಶಾಖಾಹಾರಿ), ನಟಿ ಪ್ರೀಯಾ ಶಠಮರ್ಪಣ( ಭೀಮ), ‘ ಭೈರತಿ ರಣಗಲ್’ ಚಿತ್ರದ ನಿರ್ದೇಶನಕ್ಕಾಗಿ ನರ್ತನ್, ಬೆಸ್ಟ್ ಡೈರೆಕ್ಟರ್ , ಮ್ಯಾಕ್ಸ್ ಚಿತ್ರದ ಛಾಯಾಗ್ರಹಣಕ್ಕೆ ಶೇಖರ್ ಚಂದ್ರಗೆ ಪ್ರಶಸ್ತಿ ಬಂದಿದೆ.
ಇನ್ನೂ ಕನ್ನಡ ಚಿತ್ರರಂಗದ ಪ್ರಣಯರಾಜ ಶ್ರೀನಾಥ್ ಅವರು ನಟನಾ ಬದುಕಿನಲ್ಲಿ ತೋರಿದ ಅತ್ತುತಮ ಸಾಧನೆಯನ್ನು ಪರಿಗಣಿಸಿ ಅವರಿಗೆ ಜೀವಮಾನದ ಸಾಧನೆಗಾಗಿ ಇರುವ ಪ್ರಶಸ್ತಿ ನೀಡಿ ಪತ್ರಿಕೆ ಗೌರವಿಸಿದೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿಫಲಕಗಳನ್ನು ನೀಡಿ, ಸನ್ಮಾನಿಸಿದರು. ಸಚಿವ ಮಧುಬಂಗಾರಪ್ಪ, ಪ್ರಜಾವಾಣಿ ಸಂಸ್ಥೆಯ ಕೆಎನ್ ತಿಲಕ್ ಕುಮಾರ ಸಿಎಂಗೆ ಸಾಥ್ ಕೊಟ್ಟರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.