- ಹುಳ್ಳಿಪ್ರಕಾಶ, ಸಂಪಾದಕರು
- ಸುನಾಮಿನ್ಯೂಸ್, ಹಗರಿಬೊಮ್ಮನಹಳ್ಳಿ
* ಮಾರ್ಚ್,21
ಬೇಸಿಗೆ ಬಿಸಿಲಿಗೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿನ ವಾತಾವರಣ ಕ್ಷಣ,ಕ್ಷಣಕ್ಕೂ ಕಾದ ಕಬ್ಬಿಣಕ್ಕಿಂತಲೂ ಅಧಿಕ ಎನ್ನುವಷ್ಟೇ ಬಿಸಿಲಿನ ಝಳ ಗಗನ ಮುಖಿಯಾಗಿದ್ದು ಇಡೀ ಪಟ್ಟಣದ ಎಲ್ಲಾ 23 ವಾರ್ಡ್ ಗಳ ತುಂಬಾನೂ ಯಾವುದೇ ಕ್ಷಣದಲ್ಲಾದರೂ ಕುಡಿಯುವ ನೀರಿನ ಹಾಹಾಕಾರ ಉಲ್ಬಣಗೊಳ್ಳುವಂತಹ ಲಕ್ಷಣಗಳು ಈಗಾಗಲೇ ಗಟ್ಟಿಯಾಗಿಯೇ ದಟ್ಟೈಸಿವೆ.
ಕುಡಿಯುವ ನೀರಿನ ವ್ಯತಿರಿಕ್ತ ಪರಿಸ್ಥಿತಿ ಅರಿವಿಗೆ ಬರುತ್ತಲೇ ಇಲ್ಲಿನ ಪುರಸಭೆ ಚುನಾಯಿತ ಆಡಳಿತ ಮಂಡಳಿ ಎಚ್ಚೆತ್ತು ಕೊಂಡು, ತನ್ನ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತೀರುವ ಎಲ್ಲಾ ‘ವಾಟರ್ ಫಿಲ್ಟರ್’ ಘಟಕಗಳ ಮೂಲಕ ಬೇಸಿಗೆ ಕಾಲದ ಅವಧಿ ಮುಗಿಯುವ ತನಕ ಅಂದರೇ ಬರೋಬ್ಬರಿ ಎರಡು ತಿಂಗಳ ಕಾಲ ಉಚಿತ ನೀರು ಪೂರೈಕೆ ಮಾಡುವಂತಹ ಜನಸ್ನೇಹಿ ಆದ ನಿರ್ಣಾಯವನ್ನು ಕೈಗೊಂಡು ಪಟ್ಟಣದ ಜನತೆಯ ಬಾಯಾರಿಕೆಯನ್ನು ನಿಗಿಸುವ ತನ್ನ ಕಟಿಬದ್ಧತೆಯನ್ನು ಪ್ರದರ್ಶಿಸಿದೆ.
ಪುರಸಭೆಯ ಯುವ ಉತ್ಸಾಹಿ ಅಧ್ಯಕ್ಷ ಮರಿರಾಮಣ್ಣನವರ ನೆತೃತ್ವದ ಚುನಾಯಿತ ಆಡಳಿತ ಮಂಡಳಿ ತೆಗೆದುಕೊಂಡಿರುವ ಉಚಿತ ನೀರು ಪೂರೈಸುವ ಈ ನಿರ್ಣಾಯಕ್ಕೆ ಪಟ್ಟಣಿಗರಿಂದ ವ್ಯಾಪಕ ಸ್ವಾಗತ ಸಿಕ್ಕಿದ್ದು, ಅಧ್ಯಕ್ಷರ ಕಾರ್ಯಕ್ಕೆ ವ್ಯಾಪಕವಾದ ಪ್ರಶಂಸೆಯು ವ್ಯಕ್ತವಾಗುತ್ತಿದೆ.
ಶುಕ್ರವಾರ ಬೆಳಿಗ್ಗೆ ಇಲ್ಲಿನ ಪುರಸಭಾ ಕಾರ್ಯಾಲಯದಲ್ಲಿ ಈ ಸಂಬಂಧ ಪುರಸಭಾ ಅಧ್ಯಕ್ಷಮರಿರಾಮಣ್ಣ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳ ಸಮನ್ವಯ ಸಭೆ ಜರುಗಿತು. ಈ ಸಭೆಯಲ್ಲಿ ಉಲ್ಬಣಿಸುವ ಪರಿಸ್ಥಿತಿಯ ವ್ಯಾಪಕತೆ, ಅದರಿಂದ ಉಂಟಾಗಬಹುದಾದ ಸಮಸ್ಯೆಗಳು, ಅವುಗಳ ನಿಯಂತ್ರಣದ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಆನಂತರ ಪುರಸಭಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತೀರುವ ನೀರಿನ ಘಟಕಗಳಲ್ಲಿ ಉಚಿತ ನೀರು ಪೂರೈಕೆ ನಿರ್ಣಾಯ ಕೈಗೊಳ್ಳಲಾಯ್ತು.
ಪುರಸಭಾ ಮುಖ್ಯಾಧಿಕಾರಿ ಎಂ.ಕೆ.ಮುಗುಳಿ, ಪುರಸಭಾ ಸದಸ್ಯರಾದ ರಾಜೇಶ್ ಬ್ಯಾಡಗಿ, ನವೀನ್ ಕುಮಾರ್, ನಾಗರಾಜ್ ಜನ್ನು, ನಾಮನಿರ್ದೇಶಿತ ಸದಸ್ಯ ತ್ಯಾವಣಗಿ ಕೊಟ್ರೇಶ್, ಉಪ್ಪಾರ್ ಬಾಳಪ್ಪ, ಮಾಜಿ ಸದಸ್ಯ ಡಿಶ್ ಮಂಜುನಾಥ, ತಾ. ಪಂ. ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೆಂದ್ರಪ್ಪ, ಮಾಜಿ ಗ್ರಾಪಂ ಅಧ್ಯಕ್ಷ ಗುಂಡ್ರು ಹನುಮಂತಪ್ಪ, ಮುಖಂಡರಾದ ಹೆಚ್.ಎಂ. ವಿಜಯಕುಮಾರ, ಪುರಸಭಾ ಇಂಜಿನಿಯರ್ ಹುಸೇನ್ ಬಾಷಾ ಸೇರಿದಂತೆ ಹಲವರು ಸಮನ್ವಯ ಸಭೆಯಲ್ಲಿ ಭಾಗವಹಿಸಿದ್ದರು.
*ಜನರ ಕೆಲಸ ಮಾಡಲು ಸಿಕ್ಕಿರುವ ಅವಕಾಸ ನಮ್ಮ ಪುಣ್ಯ:
ಬೇಸಿಗೆ ಕಾಲದಲ್ಲಿ ಪಟ್ಟಣದ ಜನರ ದಾಹವನ್ನು ನಿಗಿಸುವುದು ನಮ್ಮ ಅದ್ಯ ಕರ್ತವ್ಯ. ನಮ್ಮ ಮೇಲೆ ನಂಬಿಕೆ ಇಟ್ಟು ನಮಗೆ ಓಟು ಹಾಕಿ ಗೆಲ್ಲಿಸಿ, ಅಧಿಕಾರವನ್ನು ಕೊಟ್ಟಿರುವ ಮತದಾರರ ಋಣ ನಮ್ಮ ಮೇಲಿದೆ. ಸಂಕಷ್ಟಗಳ ಕಾಲದಲ್ಲಿ ಜನರ ನೆರವಿಗೆ ನಿಲ್ಲುವ ಮೂಲಕ ಬದ್ಧತೆ ಯಿಂದ ಕಾರ್ಯನಿರ್ವಹಿಸುವ ಮೂಲಕ ಅಧಿಕಾರ ಕೊಟ್ಟಿರುವ ಮತದಾರರ ಋಣ ತೀರಿಸುವ ಕೆಲಸ ಮಾಡಬೇಕು.
ಅಂತಹ ಜನಪರ ಕೆಲಸ ಮಾಡಿದಾಗಲೇ ನಾವು ಅಧಿಕಾರಕ್ಕೆ ಬಂದಿದ್ದಕ್ಕೂ ಸಾರ್ಥಕವಾಗುತ್ತೆ. ಜನರ ಪರ ಕೆಲಸ ಮಾಡಲು ನಮಗೆ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ ಎನ್ನುತ್ತಾರೆ ಪುರಸಭೆ ಅಧ್ಯಕ್ಷ ಸಿಡಿಗನಮೊಳ ಮರಿರಾಮಣ್ಣ.
*ಪರಿಸ್ಥಿತಿ ಎದುರಿಸಲು ಸಿದ್ದತೆ:
ಈಗ ಬೇಸಿಗೆ ಶುರುವಾಗಿದೆ. ಪರಿಸ್ಥಿತಿ ಉಲ್ಬಣಕ್ಕೂ ಮುನ್ನವೇ ಮುಂಜಾಗ್ರತೆವಹಿಸಿ, ಜನರಿಗೆ ತೊಂದರೆ ಆಗದಂತೆ ನಿಗಾವಹಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆ. ನಮ್ಮ ಚುನಾಯಿತ ಮಂಡಳಿ ಹಾಗು ಅಧಿಕಾರಿ, ಸಿಬ್ಬಂದಿವರ್ಗದ ನಡುವೆ ಉತ್ತಮ ಸಮನ್ವತೆಯಿದೆ. ಎಲ್ಲರೂ ಒಟ್ಟೂಗೂಡಿ ಪಟ್ಟಣ ಜನತೆಗೆ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಭಾಧಿಸದಂತೆ ಎಚ್ಚರವಹಿಸಿ ಕಾರ್ಯನಿರ್ವಹಿಸುತ್ತೇವೆ. ನೀರನ್ನು ಅನಗತ್ಯವಾಗಿ ಪೋಲು ಮಾಡದೆ, ಮಿತವಾಗಿ ಬಳಸುವ ಮೂಲಕ ಪುರಸಭೆ ಜೊತೆಗೆ ಸೇರಿಕೊಂಡು ಅಭಾವ ಪರಿಸ್ಥಿತಿಯನ್ನು ಎದುರಿಸಲು ನೆರವಾಗಬೇಕೆಂದು ಪಟ್ಟಣದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಮುಗುಳಿ.
- ಹುಳ್ಳಿಪ್ರಕಾಶ, ಸಂಪಾದಕರು.