ಹುಳ್ಳಿಪ್ರಕಾಶ, ಸಂಪಾದಕರು
ಸುನಾಮಿ ನ್ಯೂಸ್
ಹಗರಿಬೊಮ್ಮನಹಳ್ಳಿ, ಸೆ, 21
ಕ್ರೀಡಾ ವಸತಿ ಶಾಲೆಯನ್ನು ತರುವ ಮೂಲಕ ಕ್ಷೇತ್ರದಲ್ಲಿ ಕ್ರೀಡೆಗಳ ಬೆಳವಣಿಗೆಗೆ ಮತ್ತು ಕ್ರೀಡಾಪಟುಗಳಿಗೆ ಉತ್ತೇಜನ ನೀಡುವಂತಹ ಕೆಲಸವನ್ನು ನಾನು ಮಾಡುತ್ತೇನೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ.ನೇಮಿರಾಜನಾಯ್ಕ್ ಹೇಳಿದ್ದಾರೆ.
ಶನಿವಾರ ಬೆಳಿಗ್ಗೆ,ಪಟ್ಟಣದ ರಾಮನಗರದ ರಾಷ್ಟ್ರೋತ್ಥಾನ ವಿದ್ಯಾಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲೂಕ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶಾಸಕರು ಮಾತನಾಡಿದರು.
ತಾಲೂಕ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿ, ನಮ್ಮ ಕ್ಷೇತ್ರಕ್ಕೆ ಹೆಸರು ತರುವ ಕ್ರೀಡಾಪಟುಗಳಿಗೆ ಹೊರಹೊಮ್ಮಿ ಎಂದು ಕೂಟದಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳಿಗೆ ಶಾಸಕರು ಶುಭ ಹಾರೈಸಿದರು.
ಎರಡು ದಿನಗಳ ಕಾಲ ಜರುಗುವ ಈ ಕ್ರೀಡಾಕೂಟದಲ್ಲಿ ತಾಲೂಕಿನ
22 ವಲಯಗಳನ್ನು ಪ್ರತಿನಿಧಿಸಿ ನೂರಾರು ಕ್ರೀಡಾಪಟುಗಳು ವಿವಿಧ ಕ್ರೀಡೆ ಮತ್ತು ಅಥ್ಲೆಟಿಕ್ಸ್ ನಲ್ಲಿ ಸ್ಪರ್ಧಿಸಿ ಗೆಲುವಿಗಾಗಿ ಸೆಣಸಾಟ ನಡೆಸಲಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಶ ಬೇವೂರ ಪ್ರಸ್ತಾವಿಕ ಮಾತನಾಡಿದರು. ಬಿಆರ್ ಸಿ ಸಮನ್ವಯಾಧಿಕಾರಿ ಪ್ರಭಾಕರ, ಸ್ಥಳಿಯ ಮಠದ ಇಬ್ಬರು ಸ್ವಾಮಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು. ಪ್ರತಿಜ್ಞಾವಿಧಿಯನ್ನು ಹಿರಿಯ ದೈಹಿಕ ಶಿಕ್ಷಕರಾದ ಉಜ್ಜನಗೌಡರು ಭೋಧಿಸಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ರುದ್ರಪ್ಪ ನಿರೂಪಿಸಿದರು. ಶಿಕ್ಷಕಿ ಶಾರದಮ್ಮ ಮತ್ತವರ ತಂಡ ಪ್ರಾರ್ಥಿಸಿದರು.