Welcome to sunamipatrike   Click to listen highlighted text! Welcome to sunamipatrike
Tuesday, November 19, 2024
HomeUncategorizedಸದಾ ನನ್ನ ಬೆನ್ನಿಗೆ ನಿಂತಿರುವ ವಿಶ್ವಕರ್ಮ ಸಮಾಜದ ಋಣ ನನ್ನ ಮೇಲಿದೆ. – ಶಾಸಕ ಕೆ.ನೇಮಿರಾಜನಾಯ್ಕ್.

ಸದಾ ನನ್ನ ಬೆನ್ನಿಗೆ ನಿಂತಿರುವ ವಿಶ್ವಕರ್ಮ ಸಮಾಜದ ಋಣ ನನ್ನ ಮೇಲಿದೆ. – ಶಾಸಕ ಕೆ.ನೇಮಿರಾಜನಾಯ್ಕ್.

ಹುಳ್ಳಿಪ್ರಕಾಶ, ಸಂಪಾದಕರು

ಸುನಾಮಿನ್ಯೂಸ್

* ಹಗರಿಬೊಮ್ಮನಹಳ್ಳಿ,ಸೆ, 17

ವಿಶ್ವಕರ್ಮ ಸಮುದಾಯ
ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ 2008 ರಿಂದಲೂ ನನ್ನ ಬೆನ್ನಿಗೆ ನಿಂತಿದೆ. ನಾನು ಎರಡು ಸಲ ಶಾಸಕನಾಗಿ ಆಯ್ಕೆಯಾಗಲು, ನಿಮ್ಮ ಪಾತ್ರ ದೊಡ್ಡದಿದೆ. ಸಮುದಾಯದ ಬೆಳವಣಿಗೆಗೆ ಪೂರಕವಾಗುವಂತಹ ಕೆಲಸಮಾಡುವ ಮೂಲಕ ಸಮುದಾಯದ ಋಣವನ್ನು ತೀರಿಸುವೆ ಎಂದು ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್ ಅವರು ತಾಲೂಕ ವಿಶ್ವಕರ್ಮ ಸಮಾಜ ಭಾಂಧವರಿಗೆ ಭರವಸೆ ಕೊಟ್ಟಿದ್ದಾರೆ.

ಪಟ್ಟಣದ ರಾಮನಗರದ ನೂರು ಹಾಸಿಗೆ ಆಸ್ಪತ್ರೆಯ ಎದುರುಗಡೆ ಇರುವ ವಿಶ್ವಕರ್ಮ ಸಮುದಾಯ ಭವನದ ಅಮರಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಮಂಗಳವಾರ ಬೆಳಿಗ್ಗೆ ವಿಶ್ವಕರ್ಮ ಸಮಾಜ ತಾಲೂಕ ಘಟಕ ಆಯೋಜಿಸಿದ್ದ 9 ನೇ ವರ್ಷದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಾಸಕರು ಮಾತನಾಡಿದರು.

ವಿಶ್ವಕರ್ಮ ಸಮುದಾಯ ನಿನ್ನೆ,ಮೊನ್ನೆಯದ್ದಲ್ಲ ಅದಕ್ಕೆ ಸಹಸ್ರಾರು ವರ್ಷಗಳ ಬಹುದೊಡ್ಡ ಹಿನ್ನೇಲೆಯ ‌ಇತಿಹಾಸವಿದೆ. ರಾಷ್ಟ್ರೀಯ ಮಟ್ಟದಲ್ಲಿ ವಿಶ್ವಕರ್ಮ ಸಮುದಾಯವನ್ನು ಗುರುತಿಸಿ, ಮುಖ್ಯವಾಹಿನಿಗೆ ತರುವಂತಹ ಮಹತ್ವದಾಯಕವಾದ ಕೆಲಸವನ್ನು ಹತ್ತು ವರ್ಷಗಳ ಹಿಂದೆಯೇ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮಾಡಿದ್ದಾರೆ ಎಂದರು.

ರಾಜ್ಯ ಸರ್ಕಾರ ಹಣಕಾಸಿನ ಕೊರತೆಯನ್ನು ಎದುರಿಸುತ್ತೀದೆ. ಅನುದಾನ ಇಲ್ಲದೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಠಿಂತಗೊಂಡಿವೆ. ಆದರೇ ಮೈನಿಂಗ್ ಫಂಡ್, ಕೆಕೆಆರ್ ಡಿಬಿ ಅನುದಾನ ತರುವ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ, ಕಾರ್ಯಗಳು ಕುಂಠಿತವಾಗದಂತೆ ನೋಡಿಕೊಂಡಿರುವೆ ಎಂದ ಶಾಸಕ ನೇಮಿರಾಜನಾಯ್ಕ್, ಶ್ರೀಕಾಳಿಕಾದೇವಿ ದೇವಸ್ಥಾನ ಜೀರ್ಣೋದ್ಧಾರ, ಸಮುದಾಯದ ಮುಂದುವರೆದ ಕಾಮಗಾರಿಗಳಿಗೆ ಅನುದಾನ ಕಲ್ಪಿಸುವ ಭರವಸೆ ಇತ್ತರು.

ಇದಕ್ಕೂ ಮುನ್ನ ಶ್ರೀ ಕಾಳಿಕಾದೇವಿಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಪೂಜೆ ನೇರವೇರಿಸಲಿದ್ದಾರೆ. ಜೊತೆಗೆ ಯುವ ಘಟಕದ ನೂತನ ನೊಂದಾಣಿ ಸಂಖ್ಯೆಯನ್ನು ಶಾಸಕರು ಅನಾವರಣಗೊಳಿಸಿದರು.

ವಿಶ್ವಕರ್ಮ ಸಮುದಾಯದ ವೇದಬ್ರಹ್ಮ ಕಲ್ಲಹಳ್ಳಿ ಬಸವರಾಜ ಆಚಾರ್, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಶ್ರೀಗಳು ಸಾನಿಧ್ಯವಹಿಸಿದ್ದರು. ಜೆಡಿಎಸ್ ಕ್ಷೇತ್ರಧ್ಯಾಕ್ಷರಾದ ವೈ.ಮಲ್ಲಿಕಾರ್ಜುನ, ಹಿರಿಯ ಮುಖಂಡರಾದ ಬಾಚಿನಳ್ಳಿ ಶೇಖರಪ್ಪ, ವಿಶ್ವಕರ್ಮ ಸಮಾಜದ ವಿಜಯನಗರ ಜಿಲ್ಲಾಧ್ಯಕ್ಷರಾದ ಬಿಜಿ.ಬಡಿಗೇರ್, ಹಿರಿಯ ಮುಖಂಡರಾದ ಸಿದ್ದರಾಮಾಚಾರ್,, ಹೊಟೇಲ್ ಸಿದ್ದರಾಜು, ಸಿದ್ದಪ್ಪ, ನಾಗಪ್ಪ, ಮೌನೇಶ, ಯುವ ಘಟಕದ ಅಧ್ಯಕ್ಷ ಮಂಜುನಾಥ, ನೌಕರರ ಘಟಕದ ಅಧ್ಯಕ್ಷ ರಾಘವೇಂದ್ರ, ನಾಗಯ್ಯ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಸ್ಥಳಿಯ ಜಿವಿಪಿಪಿ ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಸಹ ಪ್ರಾಧ್ಯಾಪಕ ಮರಬ್ಬಿಹಾಳ ವಿರೇಶ್ ಉಪನ್ಯಾಸ ನೀಡಿದರು. ಮಾರುತಿ ಅಚಾರ್ ಪ್ರಾರ್ಥಿಸಿ, ಉಪನ್ಯಾಸಕರಾದ ಕುಮಾರಚಾರ್ ಸ್ವಾಗತಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!