- ಹುಳ್ಳಿಪ್ರಕಾಶ, ಸಂಪಾದಕರು
* ಸುನಾಮಿನ್ಯೂಸ್, ಹಗರಿಬೊಮ್ಮನಹಳ್ಳಿ, ಮಾರ್ಚ್,30
ಯುಗಾದಿ ದಿನವಾದ ಭಾನುವಾರ ಸಂಜೆ ಪಟ್ಟಣದಲ್ಲಿ ಮಳೆ ಸುರಿದು, ಬಿಸಿಲಿನ ತಾಪಕ್ಕೆ ತಂಪೆರೆಯಿತು. ಯುಗಾದಿ, ಹೊಸವರ್ಷವೆಂದೆ ಆಚರಿಸಲಾಗುತ್ತೆ. ಹಬ್ಬದ ದಿನದಂದೆ ಹೊಸಮಳೆ ಸುರಿದಿದ್ದು ಜನತೆಯಲ್ಲಿ ಸಂತಸ ಮೂಡಿಸಿತು.
ಬೆಳಗ್ಗಿನಿಂದಲೇ ಪಟ್ಟಣದಲ್ಲಿ ಸೂರ್ಯನ ಪ್ರತಾಪ ಮೇರೆ ಮೀರಿತ್ತು. ಬಿಸಿಲಿನ ತಾಪದ ಜೊತೆಗೆ ಸೆಕೆಯ ಮೀಟರ್ ವಿಪರೀತ ಎನ್ನುವಷ್ಟರ ಏರಿಕೆ ಆಗಿತ್ತು. ಬಿಸಿಲಿನ ತಾಪಕ್ಕೆ ಜನತೆ ನಿತ್ರಾಣಗೊಂಡಿದ್ದರು. ಲಿಂಬು ಶರಬತ್, ಲಸ್ಸಿ, ಮಜ್ಜಿಗೆ, ಎಳೇನೀರು, ಕೂಲ್ ಡ್ರಿಂಕ್ಸ್, ಜ್ಯೂಸ್, ಕಬ್ಬಿನಹಾಲು ಕುಡಿದು ದಾಹ ನೀಗಿಸಿಕೊಂಡು, ಬಿಸಿಲತಾಪವನ್ನು ತಣ್ಣಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಎಷ್ಟೇ ಕೊಲ್ಡ್ ಕುಡಿದರೂ ಬಿಸಿಲಿನ ಝಳ ಮಾತ್ರ ತಗ್ಗಿರಲಿಲ್ಲ.
ಆದರೇ ಸಂಜೆ ನಾಲ್ಕು ಕಾಲು ಗಂಟೆಗೆ ಸುರಿದ ಮಳೆ ತಾಪದ ಮೇಲೆ ತಂಪೆರೆಯಿತು. ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೇ ಮಳೆ ಚೆನ್ನಾಗಿ ಬಂತ್ತು. ಒಂದೇರೆಡು ಗಂಟೆಗಳ ಕಾಲ ಸುರಿದಿದ್ದರೇ ಸೂರ್ಯನ ಕಿರಣದಿಂದ ತಾಪಗೊಂಡಿದ್ದ ಭೂಮಿಯು ಕೂಲ್ ಆಗುತ್ತಿತ್ತು. ಆದರೇ ಹಲವು ನಿಮಿಷಗಳ ಕಾಲ ಮಾತ್ರವೇ ಮಳೆಸುರಿಯಿತು.
ಮಧ್ಯಾಹ್ನ ಮೂರು ಗಂಟೆಯಿಂದಲೇ ಪಟ್ಟಣದಲ್ಲಿ ಮೋಡಕವಿದ ವಾತಾವರಣವಿತ್ತು. ಸಂಜೆಯ ನಾಲ್ಕೂಕಾಲು ವೇಳೆಗೆಲ್ಲ ಕವಿದ ಮೋಡ ಮಳೆಯಾಗಿ ಮಾರ್ಪಾಟು ಆಯ್ತು. ಆರಂಭದಲ್ಲಿ ಜೋರಾದ ಗಾಳಿ ಬೀಸಿತು, ಅದರ ಬೆನ್ನಲ್ಲೇ ಮಳೆ ಸುರಿಯಿತು.
ಯುಗಾದಿ ದಿನ ಮಳೆ ಆಗುವುದು ಶುಭ ಸೂಚನೆ. ಹೊಸವರ್ಷದ ದಿನ ಸುರಿಯುವ ಮಳೆಯನ್ನು ನಮ್ಮ ಜನ ಹೊಸ ಮಳೆ ಎಂದೇ ಭಾವಿಸುತ್ತಾರೆ. ಆದರೇ ಈಗ ಸುರಿಯುವ ಮಳೆ ಪೂರ್ವ ಮುಂಗಾರು ಮಳೆ. ಮೇ ಕೊನೆ ಇಲ್ಲವೆ ಜೂನ್ ಮೊದಲ ವಾರ ಶುರುವಾಗುವ ಮುಂಗಾರು ಮನ್ಸೂನ್ ನಿಂದ ಹೊಸ ಮಳೆ ಶುರುವಾಗುತ್ತೆ ಎನ್ನುತ್ತಾರೆ ನಾಣಿಕೇರಿಯ ದೈವಸ್ಥರ ಪ್ರಮುಖರಾದ ಬಾರಿಕರ ಬಾಪೂಜಿ, ದಾದಮ್ಮನವರ ಬಸವರಾಜ.
- ಹುಳ್ಳಿಪ್ರಕಾಶ, ಸಂಪಾದಕರು