Welcome to sunamipatrike   Click to listen highlighted text! Welcome to sunamipatrike
Monday, May 19, 2025
HomeUncategorizedಬಸಯ್ಯನ ದೂರಿಡಿದು ಪತ್ತೆಗಿಳಿದವರಿಗೆ ಸಿಕ್ಕಿದ್ದು ಬರೋಬ್ಬರಿ ಆರು ಬೈಕ್ ಕದ್ದ ಬೈಕ್ ಗಳ್ಳ!

ಬಸಯ್ಯನ ದೂರಿಡಿದು ಪತ್ತೆಗಿಳಿದವರಿಗೆ ಸಿಕ್ಕಿದ್ದು ಬರೋಬ್ಬರಿ ಆರು ಬೈಕ್ ಕದ್ದ ಬೈಕ್ ಗಳ್ಳ!

  • ಹುಳ್ಳಿಪ್ರಕಾಶ, ಸಂಪಾದಕರು
  • ಸುನಾಮಿನ್ಯೂಸ್

* ಹಗರಿಬೊಮ್ಮನಹಳ್ಳಿ, ಮಾರ್ಚ್,26

ಬಸಯ್ಯ ನೀಡಿದ ಒಂದು ದೂರು ಸತತ ಆರು ಬೈಕ್ ಗಳನ್ನು ಕದ್ದವನನ್ನು ಹಗರಿಬೊಮ್ಮನಹಳ್ಳಿ ಪೊಲೀಸರು ಪತ್ತೆ ಹಚ್ಚಿ ಅವನಿಗೆಎಡೆಮುರಿ ಬೀಗಿದು, ಜೈಲಿನಲ್ಲಿ ಮುದ್ದೆ ಮುರಿಸಲು ಬಿಟ್ಟು ಬರಲು ನೆರವಾಗಿದೆ.

ದೂರು, ಎಫ್ ಐಆರ್ ಆಗುತ್ತಿದ್ದಂತೆಯೇ ಇತ್ತ ಸಿಪಿಐ ವಿಕಾಸ್ ಲಮಾಣಿ, ಪಿಎಸ್ಐ ಬಸವರಾಜ ಅಡವಿಬಾವಿ ನೆತೃತ್ವದಲ್ಲಿ ಕ್ಷೀಪ್ರಗತಿಯಲ್ಲಿಯೇ ದಾಳಿಗಿಳಿದ ಪಟ್ಟಣದ ಕ್ರೈಂ ಬ್ರಾಂಚ್ ಪೋಲಿಸರು ಬೈಕ್ ಗಳ್ಳ ಪ್ರಶಾಂತ್ ಸೋವಿನಹಳ್ಳಿಯನ್ನು ಪತ್ತೆ ಹಚ್ಚಿ ಹಿಡಿದು, ಆತನಿಂದ ಕಳ್ಳತನ ಮಾಡಿದ್ದಸುಮಾರು ಮೂರವರೇ ಲಕ್ಷರೂಪಾಯಿಗಳ ಮೌಲ್ಯದ ಆರು ಬೈಕ್ ಗಳನ್ನು ಪತ್ತೆ ಹಚ್ಚಿ, ವಶಪಡಿಸಿಕೊಳ್ಳುವಲ್ಲಿ ಸಫಲರಾದರು.

ಕೂಡ್ಲಿಗಿ ಉಪವಿಭಾಗಕ್ಕೆ ನೂತನ ಡಿವೈಎಸ್ಪಿ ಆಗಿ ಇತ್ತಿಚಿಗೆ ಅಧಿಕಾರವಹಿಸಿಕೊಂಡಿರುವ ಮಲ್ಲೇಶನಾಯ್ಕ್ ದೊಡ್ಡಮನಿ ಅವರ ಮಾರ್ಗದರ್ಶನದಲ್ಲಿ ಬೈಕ್ ಗಳನ್ನನ್ನು ಕ್ಷೀಪ್ರಗತಿಯಲ್ಲಿ ಬಂಧಿಸಿ, ಆತನಿಂದ ಬೈಕ್ ವಶಪಡಿಸಿಕೊಂಡಿರುವ ಹಗರಿಬೊಮ್ಮನಹಳ್ಳಿ ಪೋಲಿಸರ ಕಾರ್ಯಾಚರಣೆಗೆ ವಿಜಯನಗರ ಜಿಲ್ಲಾ ಪೋಲಿಸ ಅಧಿಕ್ಷಕರಾದ ಬಿಎಲ್ ಹರಿಬಾಬು, ಹೆಚ್ಚುವರಿ ಎಸ್ಪಿ ಸಲೀಂಪಾಷರವರು ಮೆಚ್ಚುಗೆ ವ್ಯಕ್ತಪಡಿಸಿ, ಪ್ರಶಂಸಿದ್ದಾರೆ.

ಇತ್ತ ಬೈಕ್ ಕಳೆದುಕೊಂಡವರು ತಮ್ಮ ಬೈಕ್ ಗಳು ಸಿಕ್ಕ ಖುಷಿಯನ್ನು ವ್ಯಕ್ತಪಡಿಸಿ, ಪೋಲಿಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಬಸಯ್ಯ ಎನ್ನುವ ನಾಗರೀಕರ ಬೈಕ್ ವೊಂದು ಇದ್ದಕ್ಕಿದ್ದಂತೆ ನಾಪತ್ತೆ ಆಗಿತ್ತು. ಅವರು ತಡಮಾಡದೇ ಪಟ್ಟಣದ ಪೋಲಿಸ್ ಠಾಣೆಗೆ ದೂರು ಕೊಟ್ಟಿದ್ರು. ಸಿಪಿಐ ವಿಕಾಸ್ ಲಮಾಣಿ ಮತ್ತು ಪಿಎಸೈ ಬಸವರಾಜ ಅಡವಿಬಾಯಿ ನೆತೃತ್ವದಲ್ಲಿ ಪೇದೆಗಳಾದ ದಶರಥ, ವೆಂಕಟೇಶ ನಾಯ್ಕ್, ಸಿದ್ದೇಶ್, ವೀರಣ್ಣ, ಪೂರ್ವಚಾರಿ, ಕಿರಣಕುಮಾರ, ವಿನಾಯಕ, ಪರುಶುರಾಮ, ಮಹೇಶ, ಬಾಲರಾಜ, ದೊಡ್ಡಬಸಪ್ಪ, ಹನುಮಂತಪ್ಪ ಪೇದೆಗಳಿದ್ದ ತಂಡ ದೂರಿನ ಜಾಡು ಹಿಡಿದು ಪತ್ತೆಕಾರ್ಯಕ್ಕೆ ಇಳಿದಾಗ ಕೊಟ್ಟೂರು ತಾಲೂಕಿನ ಮಲ್ಲನಾಯಕನಹಳ್ಳಿಯ ಪ್ರಶಾಂತ್ ಸೋವೆನಹಳ್ಳಿ ಸಿಕ್ಕಿಹಾಕಿಕೊಂಡಿದ್ದಾನೆ. ಆತನನ್ನು ಪೋಲಿಸ್ ತನಿಖೆ ಬಾಯಿ ಬಿಡಿಸಿದಾಗ ಆರು ಬೈಕ್ ಕಳ್ಳತನಗಳ ಚರಿತ್ರೆ ಬಯಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!
00:00
00:00
00:00