*ಹುಳ್ಳಿಪ್ರಕಾಶ, ಸಂಪಾದಕರು
* ಸುನಾಮಿನ್ಯೂಸ್, ಕೂಡ್ಲಿಗಿ, ಏ.5
‘ಕಲ್ಯಾಣಪಥ’ದ ಮೂಲಕ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವಂತಹ ಸುಮಾರು 1080 ಕಿಮಿಯಷ್ಟು ಎಲ್ಲಾ ಹಳ್ಳಿಗಳ ರಸ್ತೆಯನ್ನು ಅತ್ಯಂತ ಸುಸಜ್ಜಿತವಾಗಿ ನಿರ್ಮಾಣಗೊಳಿಸುವ ಮೂಲಕ ಕ್ಷೇತ್ರದಲ್ಲಿ ರಸ್ತೆ ಸಂಪರ್ಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಪ್ರಮಾಣಿಕವಾಗಿ ಶ್ರಮಿಸುತ್ತೀದ್ದೇನೆ ಎಂದು ಕ್ಷೇತ್ರದ ಯುವ ಉತ್ಸಾಹಿ ಶಾಸಕರಾದ ಡಾ. ಎನ್ಟಿ.ಶ್ರೀನಿವಾಸ ಹೇಳಿದ್ದಾರೆ.
ಅವರು ಕ್ಷೇತ್ರ ವ್ಯಾಪ್ತಿಯ ತುಪಾಕನಹಳ್ಳಿ ಗ್ರಾಮದಲ್ಲಿ ನೂತನ ರಸ್ತೆ ನಿರ್ಮಾಣಕಾರ್ಯಕ್ಕೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು
ನಮ್ಮ ಕ್ಷೇತ್ರದಲ್ಲಿ ಹಲವು ದಶಕಗಳಿಂದಲೂ ಹಳ್ಳಿಗಾಡಿನಲ್ಲಿ ರಸ್ತೆ ದುರುಸ್ಥಿ, ಹೊಸ ರಸ್ತೆ ನಿರ್ಮಾಣದ ಸಮಸ್ಯೆ ಕಾಡ್ತಾಯಿದೆ. ಕಲ್ಯಾಣಪಥವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕ್ಷೇತ್ರವನ್ನು ಕೆಟ್ಟ ರಸ್ತೆಗಳ ಕಾಟ ದಿಂದ ಮುಕ್ತಿಗೊಳಿಸಿ, ಕ್ಷೇತ್ರದ ಜನರಿಗೆ ಸುಗಮ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸುವುದು ಖಚಿತ ಎನ್ನುವ ದೃಢತೆ ಶಾಸಕರ ಮಾತಿನಲ್ಲಿತ್ತು.
ನಾನು ಪ್ರತಿನಿಧಿಸುತ್ತೀರುವ ಕೂಡ್ಲಿಗಿ ಕ್ಷೇತ್ರ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ
ಹಲವು ದಶಕಗಳಿಂದಲೂ ನೆನೆಗುದಿಗೆ ಬಿದ್ದಿರುವಂತಹ ಹಳ್ಳಿಗಾಡಿನ ರಸ್ತೆಗಳ ದುರಸ್ಥಿ ಮತ್ತು ನಿರ್ಮಾಣಕ್ಕೆ ಒತ್ತು ಕೋಡುವ ಸಲುವಾಗಿಯೇ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ
‘ಕಲ್ಯಾಣ ಪಥ’ ಎನ್ನುವ ವಿನೂತನ ಯೋಜನೆಯೊಂದನ್ನು ಜಾರಿಗೆ ತಂದಿದೆ ಎಂದು ಜನರಿಗೆ ಕಲ್ಯಾಣಪಥದ ಬಗ್ಗೆ ಶಾಸಕ ಡಾ.ಎನ್ಟಿ ಶ್ರೀನಿವಾಸ ತಮ್ಮ ಭಾಷಣದಲ್ಲಿ ವಿವರಿಸಿದರು.
ಸಾವಿರಾರು ಕೋಟಿ ರೂಪಾಯಿಗಳ ಅನುದಾನದಲ್ಲಿ ಸಂಪೂರ್ಣ ಗ್ರಾಮೀಣ ರಸ್ತೆಗಳಿಗೆ ಅದ್ಯತೆ ಕೊಟ್ಟು ರಸ್ತೆ ನಿರ್ಮಾಣ ಮಾಡಲಾಗುತ್ತದೆ ಹೊರತು ಈ ಅನುದಾನದಲ್ಲಿ ಒಂದೇ, ಒಂದು ಪೈಸೆಯನ್ನು ಕೂಡ ಪಟ್ಟಣದ ರಸ್ತೆಗಳಿಗೆ ಡೈವರ್ಟ್ ಮಾಡಲಾಗುವುದಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು.
ತುಪಾಕನಹಳ್ಳಿ ಯಿಂದ ಅಕಾಪುರ ರಸ್ತೆ, ಬಡಲಡಿಕಿ ಯಿಂದ ಬೀರಲಗುಡ್ಡ, ಬೊಪ್ಪಲಾಪುರ ದಿಂದ ತಿಮ್ಮಲಾಪುರ, ಶಿವಪುರ ದಿಂದ ಜಂಗಮಸೋವೆನಹಳ್ಳಿ ರಸ್ತೆಗಳಿಗೆ ಶಾಸಕರು ಭೂಮಿ ಪೂಜೆ ನೇರವೇರಿಸಿದರು.
ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ದನಗೌಡ, ಮುಖಂಡರಾದ ಬಡಲಡಿಕಿ ಸತೀಶ್, ತುಪಾಕನಹಳ್ಳಿ ರಮೇಶ, ಜಿಪಂ ಎಇಇ ಮಲ್ಲಿಕಾರ್ಜುನಗೌಡ ಸೇರಿದಂತೆ ಬಡಲಡಿಕಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಶಾಸಕರ ಜೊತೆಯಲ್ಲಿ ರಸ್ತೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.