- ಹುಳ್ಳಿಪ್ರಕಾಶ, ಸಂಪಾದಕರು
* ಸುನಾಮಿನ್ಯೂಸ್, ಕೂಡ್ಲಿಗಿ, ಏ,7
ಜನರ ನಿರೀಕ್ಷೆಗಳು ಜಾಸ್ತಿ ಇವೆ. ಅದನ್ನು ಮೀರಿ ನಾವು ಕೆಲಸ ಮಾಡ್ತಾಯಿದ್ದೇವೆ. ಸುಳ್ಳು ವದಂತಿಗಳಿಗೆ ಕಿವಿ ಕೋಡಬೇಡಿ. ಯಾವುದನ್ನು ಅನ್ಯಥಾ ಬಾವಿಸಬಾರದು. ಯಾರಿಗೂ ತಾರತಮ್ಮ ಮಾಡುವುದಿಲ್ಲ. ನನಗೆ ಸುಳ್ಳು, ಪೊಳ್ಳು ಹೇಳಿ ಅಭ್ಯಾಸ ಇಲ್ಲ. ಅತ್ಯಂತ ಪ್ರಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಕ್ಷೇತ್ರದ ಪ್ರಗತಿ, ಇಲ್ಲಿನ ಜನರ ಕಲ್ಯಾಣದ ಗುರಿ ಇಟ್ಟುಕೊಂಡು ನಾನು ಕೆಲಸ ಮಾಡ್ತಾಯಿದ್ದೇನೆ ಎಂದು ಕ್ಷೇತ್ರದ ಉತ್ಸಾಹಿ ಯು ಶಾಸಕರಾದ ಡಾ.ಎನ್ಟಿ ಶ್ರೀನಿವಾಸ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕ್ಷೇತ್ರದ ಬಡಲಡಕು ಗ್ರಾಪಂ, ಶಿವಪುರ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೆಲಸಗಳ ಭೂಮಿ ಪೂಜೆ ನೇರವೇಸಿ ಶಾಸಕರು ಮಾತನಾಡಿದರು.
ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರದ ಯಾವುದೇ ಭಾಗಕ್ಕೂ, ಯಾವ ಊರಿಗೂ ನಾನು ಅನ್ಯಾಯ ಮಾಡುವುದಿಲ್ಲ. ಶಾಲೆ,ರಸ್ತೆ, ಕುಡಿಯುವ ನೀರು, ಬೆಳಕು, ಚರಂಡಿ ಸೇರಿದಂತೆ ಎಲ್ಲಾ ಮೂಲಭೂತ ಹಾಗೂ ಸರ್ಕಾರ ದಿಂದ ಲಭ್ಯವಾಗುವಂತಹ ಎಲ್ಲಾ ಸೌಲಭ್ಯಗಳನ್ನು ಸರ್ವರಿಗೂ ಕಲ್ಪಿಸಿಕೊಡುತ್ತೇನೆ ಎಂದರು.
ಕ್ಷೇತ್ರದಲ್ಲಿ ಎರಡು ನೂರಕ್ಕೂ ಹೆಚ್ಚಿನ ಊರುಗಳಿವೆ. 2023ರಲ್ಲಿ ನಿಮ್ಮ ಆರ್ಶೀವಾದ ದಿಂದ ಗೆದ್ದ ಬಳಿಕ ಕ್ಷೇತ್ರದ ಪ್ರತಿ ಊರಿಗೂ ಕನಿಷ್ಠ ಪಕ್ಷ ಮೂರು,ಮೂರು ಸಲ ಹೋಗಿ, ಬಂದಿದ್ದೇನೆ. ಪ್ರತಿ ಊರಿನ ಜನರ ಮತ್ತು ಆಯಾ ಗ್ರಾಮಗಳ ಸಮಸ್ಯೆಗಳನ್ನು ಖುದ್ದು ಅಲಿಸಿದ್ದೇನೆ. ಸಾಕಷ್ಟು ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸದ ವೇಗವನ್ನು ಹೆಚ್ಚಿಸಿದ್ದೇನೆ. ಕ್ಷೇತ್ರವನ್ನು ಪ್ರಗತಿಪಥದತ್ತ ಕೊಂಡೊಯ್ಯುವ ಮೂಲಕ ನೀವು ನನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದರು ಶಾಸಕ ಡಾ.ಶ್ರೀನಿವಾಸ.
.
ನನ್ನ ಬಳಿಗೆ, ದೊಡ್ಡವರೇ ಬರಲಿ, ಸಣ್ಣವರು ಬರಲಿ ಎಲ್ಲರನ್ನು ಬಹುವಚನದಲ್ಲಿ ಮಾತನಾಡಿಸಿ, ಅವರಿಗೆ ಗೌರವ ಕೊಡುತ್ತೇನೆ. ಯಾವತ್ತೂ ಯಾರನ್ನು ಹಗುರವಾಗಿ ಕಂಡಿಲ್ಲ. ನನಗೆ ಅಧಿಕಾರದ ದಾಹವಾಗಲಿ, ಅಹಂಕಾರವಾಗಲಿ ಇಲ್ಲ. ಜನರ ಮೇಲೆ ದಬ್ಬಾಳಿಕೆ ಮಾಡುವ ಪ್ರವೃತ್ತಿ ನನಗಿಲ್ಲ. ಅಧಿಕಾರ ಚಲಾಯಿಸುವ ಮನಸ್ಥಿತಿ ನನ್ನದಲ್ಲ. ಜನರು ಮತ್ತು ಕ್ಷೇತ್ರದ ಸೇವೆ ಮಾಡುವ ಸೇವಕ ನಾನು. ಮತದಾರರು ಕೊಟ್ಟಿರುವ ಅಧಿಕಾರವನ್ನು ಕ್ಷೇತ್ರದ ಅಭಿವೃದ್ಧಿಗೆ, ಸಾರ್ವಜನಿಕರ ಕಲ್ಯಾಣಕ್ಕೆ ಬಳಸುವ ಮೂಲಕ ನೀವು ನನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದರು.
ತುಪಾಕನಹಳ್ಳಿ ಯಿಂದ ಅಕಾಪುರ ರಸ್ತೆ, ಬಡಲಡಿಕಿ ಯಿಂದ ಬೀರಲಗುಡ್ಡ, ಬೊಪ್ಪಲಾಪುರ ದಿಂದ ತಿಮ್ಮಲಾಪುರ, ಶಿವಪುರ ದಿಂದ ಜಂಗಮಸೋವೆನಹಳ್ಳಿ ರಸ್ತೆ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೇರವೇರಿಸಿದರು.
ಕೂಡ್ಲಿಗಿ ಪುರಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಬಡಲಡುಕು ಗ್ರಾಪಂ ಅಧ್ಯಕ್ಷೆ ಮಂಜುಳಾ ಸತೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ಧನಗೌಡ, ಮುಖಂಡರಾದ ಬಡಲಡಿಕಿ ಸತೀಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರುಗಳು ಭೂಮಿ ಪೂಜೆ ಕಾರ್ಯದಲ್ಲಿ ಭಾಗವಹಿಸಿದ್ದರು.