- ಹುಳ್ಳಿಪ್ರಕಾಶ, ಸಂಪಾದಕರು
* ಸುನಾಮಿನ್ಯೂಸ್, ಹಗರಿಬೊಮ್ಮನಹಳ್ಳಿ, ಏ.8
ನಾನು ಸರ್ಕಾರಿ ಶಾಲೆಯಲ್ಲಿ ಓದಿರುವೆ. ಇವತ್ತು ಈ ಪಟ್ಟಣದ ಪ್ರಥಮಪ್ರಜೆ ಸ್ಥಾನಮಾನಕ್ಕೇರಿದ್ದೇನೆ ಇದು ಸರ್ಕಾರಿ ಶಾಲೆ ನನಗೆ ಕಲ್ಪಿಸಿ ಕೊಟ್ಟಿರುವ ಗೌರವ. ನಾನು ಹೆಮ್ಮೆಯಿಂದ ಹೇಳುವೆ ಗವರ್ನಮೆಂಟ್ ಸ್ಕೂಲ್ ಸ್ಟೂಡೆಂಟ್ ನಾನೆಂದು ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ ಮರಿರಾಮಪ್ಪ ಹೆಮ್ಮೆಪಟ್ಟ ಪರಿ ಇದು.
ಮಂಗಳವಾರ ಪಟ್ಟಣದ ರಾಮನಗರದ 21ನೇ ವಾರ್ಡ್ ನಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿದ ನೂತನ ಗೇಟ್ , ಕುಡಿಯುವ ನೀರಿನ ಟ್ಯಾಂಕ್ ಹಾಗೂ ಸಿವಿ.ರಾಮನ್ ಪ್ರಯೋಗಶಾಲೆಯ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಈ ಶಾಲೆ ಮುಕ್ಕಾಲು ಶತಮಾನದ ಇತಿಹಾಸ ಇರುವ ಶಾಲೆ ಆಗಿದೆ. ಇಲ್ಲಿ ಓದಿದವರು ದೇಶ,ವಿದೇಶಗಳಲ್ಲಿ ಕೆಲಸ ಮಾಡ್ತಾಯಿದ್ದಾರೆ. ಹಲವರು ಉನ್ನತ ರಾಜಕೀಯ ಸ್ಥಾನಮಾನಕ್ಕೇರಿದ್ದಾರೆ. ನಾನು ಪ್ರತಿನಿಧಿಸುವ 21ನೇ ವಾರ್ಡ್ ಗೆ ಈ ಶಾಲೆ ಸೇರುತ್ತೆ ಈ ಶಾಲೆ ಸಹಿತ ನಮ್ಮ ಪಟ್ಟಣದ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ ಶಾಲೆಯನ್ನು ಉನ್ನತ ಸ್ಥಾನಕ್ಕೇರಿಸಲು ನಾನು ಕಂಕಣಬದ್ದನಾಗಿದ್ದೇನೆ ಎಂದರು ಮರಿರಾಮಪ್ಪ.
ಪುರಸಭೆಯ ಹಿರಿಯ ಸದಸ್ಯರಾದ ಪವಾಡಿ ಹನುಮಂತಪ್ಪ ಮಾತನಾಡಿ, ನಾನು ಕೂಡ ರಾಮನಗರ ಶಾಲೆಯ ಹಳೇಯ ವಿದ್ಯಾರ್ಥಿ. ನಾನು ಓದಿದ ಈ ಶಾಲೆಯನ್ನು ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವ ರೀತಿಯಲ್ಲಿಯೇ ಅಭಿವೃದ್ಧಿ ಪಡಿಸಲು ನಾನು ಆಶಯಹೊಂದಿರುವೆ. ಆಪ್ರಕಾರ ಈಗ ಈ ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತೀವೆ ಎಂದರು.
ನಿವೃತ್ತ ಶಿಕ್ಷಕರಾದ ಎಂಪಿಎಂ ಚನ್ನವೀರಯ್ಯ ಅವರು ಸಾನಿಧ್ಯವಹಿಸಿದ್ದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಾದಮ್ಮನವರ ಬಸವರಾಜ, ತಾಪಂ ಮಾಜಿ ಸದಸ್ಯ ದೇವೆಂದ್ರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಗುಂಡ್ರು ಹನುಂಮತಪ್ಪ, ಮುಖಂಡರಾದ ಡಿಶ್ ಮಂಜುನಾಥ, ಪೆಂಟರ್ ಬಾಬು, ಸೊನ್ನದ್ ಗುರುಬಸವರಾಜ, ಮಡಿವಾಳರ ಪ್ರಕಾಶ, ವಾಹಿದ್, ಬಲ್ಲಾಹುಣ್ಸಿ ಜಂಹಾಗೀರ್,
ಎಸ್ಡಿಎಂಸಿ ಅಧ್ಯಕ್ಷ ಶಹಾಬುದ್ದಿನ್, ಉಪಾಧ್ಯಕ್ಷೆ
ಹನುಮಂತಮ್ಮ, ಸದಸ್ಯರಾದ ಗೊಣೇಪ್ಪ, ಮಂಜುಳಾ, ಶಂಶಾದ್. ಮುಖ್ಯೋಪಾಧ್ಯಯರಾದ ರಾಮಪ್ಪ, ಶಿಕ್ಷಕರಾದಮೃಘರಾಜೇಂದ್ರ, ಮೂಕಪ್ಪ, ಆರ್ ಎಸ್ ಕಂದಗಲ್, ಶಾಕುಂತಲಮ್ಮ, ಸವಿತಮ್ಮ, ರೇಖಾ, ದೇವಿರಮ್ಮ, ಗೀತಮ್ಮ, ಗಂಗಮ್ಮ, ವಾಣಿ, ಮೈತ್ರಿ, ಸೋನಿಯಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.