* ಸುನಾಮಿನ್ಯೂಸ್, ಜೂನ್,17
ಅಕ್ಟೋಬರ್ ಮಾಸದಲ್ಲಿ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಖಂಡಿತಾ ಆಗೇ ಆಗುತ್ತೇ ಎನ್ನುವ ವಾತಾವರಣ ಕಾಂಗ್ರೆಸ್ ರಾಜಕಾರಣದಲ್ಲಿ ದಟ್ಟವಾಗಿಯೇ ದಟ್ಟೈಸಿದೆ. ಇದನ್ನು ಸಬಲಪಡಿಸುವ ಪೂರಕ ಬೆಳವಣಿಗೆಗಳು ಕೂಡ ಕಾಂಗ್ರೆಸ್ ಹೈಕಮಾಂಡ್ ನೋಳಗೆ ಬಿರುಸಾಗಿ ನಡೆಯುತ್ತೀವೆ.
ಸಿದ್ದರಾಮಯ್ಯ ಕೆಳಗಿಳಿದು
ಖಾಲಿ ಮಾಡುವ ಮುಖ್ಯಮಂತ್ರಿ ಕುರ್ಚಿ ಮೇಲೆ ಕುಳಿತುಕೊಳ್ಳಲು ಬಹು ಮುಖ್ಯವಾಗಿ ಹಾಲಿ ಡಿಸಿಎಂ ಡಿಕೆಶಿವಕುಮಾರ ಕಂಡ,ಕಂಡ ದೇವರೆಲ್ಲರನ್ನೂ ಸುತ್ತೂತ್ತು ಸಿಎಂ ಕುರ್ಚಿಯತ್ತ ಯಾರು ನುಸಳದಂತೆ ಈಗಿನಿಂದಲೇ ಕಟ್ಟೇಚ್ಚರವಹಿಸಿರುವುದು ಇಡೀ ಕರ್ನಾಟಕಕ್ಕೆ ಗೊತ್ತಿದೆ! ಹೈಕಮಾಂಡ್ ಗಮನಕ್ಕೂ ಇದೆ.
ಡಿಕೆಶಿವಕುಮಾರ ಇಷ್ಟೇಲ್ಲ ನಿಗಾವಹಿಸಿ ಸಿಎಂ ಕುರ್ಚಿಯನ್ನು ಕಣ್ಣರೆಪ್ಪೆ ಮಿಟುಕಿಸದಂತೆ ಕಾಯುತ್ತೀರುವಾಗಲೇ ಕೂಡ್ಲಿಗಿ ಪಟ್ಟಣದಲ್ಲಿ
‘ಮುಂದಿನ ಮುಖ್ಯಮಂತ್ರಿ ಸತೀಶ ಜಾರಕಿಹೊಳಿ’ ಎನ್ನುವ ಘೋಷಣೆ ಅಭಿಮಾನಿಗಳಿಂದ ಬಲವಾಗಿಯೇ ಮೊಳಗಿದೆ.
ಘೋಷಣೆ ಕೇಳಿಸಿಕೊಂಡು ಮುಗುಳುನಗೆ ತೋರುವ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಅವರು ಸಮ್ಮತಿಸಿದ್ದು ಕೂಡ ಬಲು ಇಂಟರೆಸ್ಟಿಂಗ್ ಆದ ಸುದ್ದಿ.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆವತಿಯಿಂದ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆಗಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕ್ಷೇತ್ರದ ಶಾಸಕರಾದ ಡಾ.ಎನ್ಟಿ ಶ್ರೀನಿವಾಸ ಜೊತೆಗೂಡಿ ಮಂಗಳವಾರ ಮಧ್ಯಾಹ್ನ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸುತ್ತಿದ್ದಂತೆಯೇ ನೆರೆದಿದ್ದ ಅಭಿಮಾನಿಗಳು ಅಹಿಂದ ನಾಯಕ ಸತೀಶ ಜಾರಕಿಹೊಳಿಗೆ ಜಯವಾಗಲಿ ಎನ್ನುವ ಘೋಷಣೆ ಕೂಗಿದರು, ಇದರ ಬಳಿಕವೇ ಮುಂದಿನ ಮುಖ್ಯಮಂತ್ರಿ ನಮ್ಮ ನಾಯಕ ಸತೀಶ ಜಾರಕೀಹೊಳಿ ಎಂದು ಜೋರಾಗಿ ಘೋಷಣೆ ಕೂಗಲಾರಂಭಿಸಿದರು.
ತಮ್ಮನ್ನು ಮುಂದಿನ ಮುಖ್ಯಮಂತ್ರಿ ಎಂದು ಕೂಗಿದ ಅಭಿಮಾನಿಗಳು ತಂದಿದ್ದ ಹೂಮಾಲೆಗೆ ನಸು ನಗುತ್ತಲೆ ಮಂತ್ರಿ ಸತೀಶ ಜಾರಕಿಹೊಳಿ ಕೊರಳೊಡ್ಡಿ, ಶಾಲು ಹೊದಿಸಿಕೊಂಡು ಅಭಿಮಾನಿಗಳ ಹೆಗಲ ಮೇಲೆ ಕೈ ಇಟ್ಟು ಬೆನ್ನು ತಟ್ಟಿದರು. ಇದನ್ನು ಗಮನಿಸಿದಾಗ ಸಿಎಂ ಕುರ್ಚಿ ಕಡೆಗೊಂದು ಸತೀಶ ಜಾರಕಿಹೊಳಿ ಅವರ ಕಣ್ಣು ಇದೆ ಎನ್ನುವುದು ನಿರೂಪಿಸಿತು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.