Welcome to sunamipatrike   Click to listen highlighted text! Welcome to sunamipatrike
Wednesday, November 20, 2024
HomeUncategorizedಪತ್ರಿಕೆ ಹಂಚುವ ಹುಡುಗ; ಪಟ್ಟಣದ ಪ್ರಥಮ ಪ್ರಜೆ! ರಂಗಭೂಮಿ ತವರೂರಿನಲ್ಲಿ ವಿಶಿಷ್ಟ ಸಾಧನೆ ಮಾಡಿದ ಪೇಪರ್...

ಪತ್ರಿಕೆ ಹಂಚುವ ಹುಡುಗ; ಪಟ್ಟಣದ ಪ್ರಥಮ ಪ್ರಜೆ! ರಂಗಭೂಮಿ ತವರೂರಿನಲ್ಲಿ ವಿಶಿಷ್ಟ ಸಾಧನೆ ಮಾಡಿದ ಪೇಪರ್ ಶಿವಣ್ಣ.

  • ಹುಳ್ಳಿಪ್ರಕಾಶ, ಸಂಪಾದಕರು
  • ಸುನಾಮಿನ್ಯೂಸ್
  • ಕೂಡ್ಲಿಗಿ, ಆ,19
    ಸೋಮವಾರ ಮಧ್ಯಾಹ್ನ ಪಟ್ಟಣ ಪಂಚಾಯ್ತಿ ರಾಜಕಾರಣದಲ್ಲಿ ವಿನೂತವಾದ ಮೈಲ್ಲುಗಲ್ಲೊಂದು ಸ್ಥಾಪನೆ ಆಯ್ತು.‌

ಅದೇನೆಂದರೇ ಒಂದು ಕಾಲದಲ್ಲಿ ಈ ಪಟ್ಟಣದ ಮನೆ,ಮನೆಗೂ ಓಡಾಡಿ ಪತ್ರಿಕೆ ಹಂಚುತ್ತಿದ್ದ ಹುಡುಗ ಈ ಪಟ್ಟಣದ ಪ್ರಥಮ ಪ್ರಜೆ ಆಗಿ ಅವಿರೋಧವಾಗಿ ಆಯ್ಕೆಗೊಳ್ಳುವ ಮೂಲಕ ರಂಗಭೂಮಿಯ ತವರೂರಿನ ರಾಜಕಾರಣದಲ್ಲಿ ದುರ್ಬಲರು, ಬಡವರು ಕೂಡ ಉನ್ನತ ಹುದ್ದೆಗೇರ ಬಹುದೆನ್ನುವುದು ನಿರೂಪಿಸಿದ.

ಈ ಕ್ಷೇತ್ರದ ಯುವ ಶಾಸಕ ಡಾ. ಎನ್.ಟಿ.ಶ್ರೀನಿವಾಸ, ಬಳ್ಳಾರಿ ಸಂಸದರಾದ ಈ.ತುಕಾರಾಂ ಹಾಗೂ ಪಟ್ಟಣ ಪಂಚಾಯ್ತಿಯ ಸರ್ವಸದಸ್ಯರುಗಳು ಒಂದಾಗಿ ಸೇರಿ ಪತ್ರಿಕೆ ಹಂಚುವ ಹುಡುಗನ ಸಾಧನೆಗೆ ಪಕ್ಷಭೇದ, ಜಾತಿ,ಮತ ವ್ಯತ್ಯಾಸ ಬದಿಗಿಟ್ಟು ಕೈಜೋಡಿಸಿ, ಶುಭಹಾರೈಸಿದ್ದು ಪತ್ರಿಕೆ ಹಂಚುವ ಹುಡುಗ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರನಾಗಿದ್ದಾನೆ ಎನ್ನುವುದನ್ನು ಎತ್ತಿತೋರಿಸಿತು.

ಶ್ರದ್ದೆ, ಪ್ರಮಾಣಿಕತೆ, ಸರ್ವರನ್ನು ಗೌರವಿಸುವಂತಹ ಗುಣ, ಸಮಾಸೇವೆ ಮಾಡುವಂತಹ ಮನಸ್ಸಿದ್ದರೇ ಅಂತಹ ವ್ಯಕ್ತಿತ್ವದ ವ್ಯಕ್ತಿಯನ್ನು, ಪಕ್ಷಗಳ ಹಂಗು ಮೀರಿ, ಜಾತಿ,ಧರ್ಮಗಳ ಗಡಿ ಮೀರಿ ಕೊಂಡು ಅಧಿಕಾರ ಒಲಿದು ಬರುತ್ತೇ ಎನ್ನುವುದಕ್ಕೆ ಸೋಮವಾರ ಮಧ್ಯಾಹ್ನ ಕೂಡ್ಲಿಗಿ ಪಟ್ಟಣ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಕಾವಲ್ಲಿ ಶಿವಪ್ಪನೇ ಇದಕ್ಕೆ ಬಹು ದೊಡ್ಡ ಸಾಕ್ಷಿ.

ಪಟ್ಟಣ ಪಂಚಾಯ್ತಿಯಲ್ಲಿ ಪ್ರಸ್ತುತ 6ನೇ ವಾರ್ಡ್ ನ್ನು ಪ್ರತಿನಿಧಿಸುತ್ತೀರುವ ಕಾವಲ್ಲಿ ಶಿವಪ್ಪ ನಾಯಕ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನು ಹೌದು. ಎರಡನೇಯ ಬಾರಿಗೆ ಕೌನ್ಸಿಲರ್ ಆಗಿರುವ ಕಾವಲ್ಲಿ ಶಿವಪ್ಪನಾಯಕ, ನಮ್ಮ ಶಿವು, ನಮ್ಮಣ್ಣ ಶಿವಣ್ಣ ಎನ್ನುವಷ್ಟರ ಮಟ್ಟಿಗೆ ಈ ಪಟ್ಟಣದಲ್ಲಿ ಪ್ರತಿಯೋಬ್ಬರಿಗೂ ಚಿರಪರಿಚಿತ ವ್ಯಕ್ತಿ.

ಕಳೆದ 25 ವರ್ಷಗಳಿಂದ ಸಮಾಜ ಸೇವೆಯ ಜೊತೆಗೆ ರಾಜಕೀಯ ಮಾಡುತ್ತ ಬಂದಿರುವ ಅವರು ತಾವು ಮುಂದೊಂದು ದಿನ ಈ ಪಟ್ಟಣ ಪಂಚಾಯ್ತಿಯ ಅಧ್ಯಕ್ಷರಾಗುವ ಕನಸನ್ನು ಹೊತ್ತವರಲ್ಲ.ಪಕ್ಷದ ನಾಯಕರ ಬೆಂಬಲ, ಅದೃಷ್ಟ ಇದ್ರೇ ಅಧಿಕಾರ ತಾನಾಗಿಯೇ ಹುಡುಕಿಕೊಂಡು ಬರುತ್ತೆ ಎಂದು ಕೊಂಡು ಜನರಅೆಯಲ್ಲಿ ನಿರತವಾಗುತ್ತಿದ್ದ ಪರೋಪಕಾರಿ ಯುವಮುಂದಾಳು ಆಗಿದ್ರು ಕಾವಲ್ಲಿ ಶಿವಣ್ಣ.

ಪಟ್ಟಣ ಪಂಚಾಯ್ತಿಯ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾದಾಗ ಈ ಸಲ ನಿಸಾರ್ಥ ದಿಂದ ಸಮಾಜಸೇವೆ ಮಾಡುತ್ತೀರುವ ಕಾವಲ್ಲಿ ಶಿವಪ್ಪ ನಾಯಕ ಅವರನ್ನೇ ಅಧ್ಯಕ್ಷರನ್ನಾಗಿಸ ಬೇಕೆನ್ನುವ ಮಾತುಗಳು ಜೋರಾಗುತ್ತವೆ.

ಇತ್ತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಜೊತೆಗೆ ಬಳ್ಳಾರಿ ಲೋಕಸಭಾ ಸದಸ್ಯರಾಗಿ ಕಾಂಗ್ರೆಸ್ಸಿನ ಈ ತುಕಾರಾಂ, ಕೂಡ್ಲಿಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಡಾ. ಶ್ರೀನಿವಾಸ್ ಅವರಿದಿದ್ದು ಸಹಜವಾಗಿಯೇ ಶಿವಪ್ಪನ ಅಧ್ಯಕ್ಷ ಸ್ಥಾನದ ಜನರ ಆಶೋತ್ತರಕ್ಕೆ ಬಲ ತುಂಬುತ್ತೆ. ಎಲ್ಲರ ಒತ್ತಾಸೆ ಮೇರೆಗೆ ಇತ್ತ ಶಿವಪ್ಪನೂ ಪಕ್ಷದ ಜಿಲ್ಲಾಧ್ಯಕ್ಷರು ಸೇರಿದಂತೆ ಎಲ್ಲರ ವಿಶ್ವಾಸವನ್ನು ಗಳಿಸುತ್ತಾರೆ.

ಆಗೇನೆ, ಪಟ್ಟಣ ಪಂಚಾಯ್ತಿಯ ತನ್ನ ಪಕ್ಷದ ಹಾಗು ಇನ್ನೀತರೆ ಪಕ್ಷದ ಸದಸ್ಯರ ಕಡೆಯಿಂದ ಪ್ರಬಲವಾದ ವಿರೋಧ ಎದುರಾಗುವುದಿಲ್ಲ. ಶಿವಣ್ಣ ಊರಿನ ಅಭಿವೃದ್ಧಿ ಪರವಾಗಿ ಸಾಕಷ್ಟು ಕೆಲಸ,ಕಾರ್ಯಗಳನ್ನು ಮಾಡುತ್ತಾ ಬರುತ್ತೀದ್ದಾನೆ ಈ ಸಲ ಆತನಿಗೊಂದು ಅವಕಾಶ ಕೊಟ್ಟು ಬಿಡೋಣ ಎನ್ನುವ ಮಾತುಗಳು ತೂಕ ಪಡೆದುಕೊಳ್ಳುತ್ತವೆ.

ಈ ಎಲ್ಲಾ ಬೆಳವಣಿಗೆಗಳು ಪತ್ರಿಕೆ ಹಂಚುವ ಹುಡುಗನನ್ನು ಟೌನ್ ಪಂಚಾಯತ್ ಛೇರ್ ಮೇನ್ ಕುರ್ಚಿ ಮೇಲೆ ತಂದು ಕೂಡಿಸಲು ರಹದಾರಿಯಾಗಿ ಶಿವಣ್ಣನಿಗೆ ನೆರವಾಗುವ ಮೂಲಕ ಪತ್ರಿಕೆ ಹಂಚುವ ಹುಡುಗನು ಪಟ್ಟಣದ ಪ್ರಥಮ ಪ್ರಜೆ ಆಗಬಹುದು ಎನ್ನುವ ಸಾಧನೆಗೆ ಅಡಿಪಾಯವಾದವು.

ನಿಷ್ಠಾವಂತ:

ಲಾಗಾಯ್ತಿನಿಂದಲೂ ಕಾಂಗ್ರೆಸ್ ಪಕ್ಷದ ಜೊತೆಗಿರುವ ಶಿವಪ್ಪ, ನಿಷ್ಠಾವಂತ ಕಾರ್ಯಕರ್ತ. ಪಕ್ಷದಲ್ಲಿ ಬ್ಲಾಕ್, ಜಿಲ್ಲಾ ಮಟ್ಟದಲ್ಲಿ ವಿವಿಧ ಹುದ್ದೆಗಳ ಕಾರ್ಯಭಾರ ನಿಭಾಯಿಸಿದ್ದಾರೆ. ಕೂಡ್ಲಿಗಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹಾಗೂ ಪ್ರತಿ ಚುನಾವಣೆಯಲ್ಲಿ ಪಕ್ಷದ ಪರವಾಗಿ ನಿಷ್ಠೆಯಿಂದ ಕೆಲಸ ಮಾಡುತ್ತ ಬಂದಿದ್ದಾರೆ. ಈ ನಿಷ್ಠೆ ಇವತ್ತು ಅವರನ್ನು ಪಟ್ಟಣದ ಪ್ರಜೆಯನ್ನಾಗಿಸುವ ಗೌರವದ ಕೀರಿಟ್ ವನ್ನು ಅವರಿಗೆ ತೋಡಿಸಿದೆ.

ಪತ್ರಿಕೆ ಹಂಚಿಕೆ:

ಬಡತನದ ಕುಟುಂಬ ಹಿನ್ನೆಲೆಯ ಶಿವಪ್ಪ, ತಮ್ಮ 14ನೇ ವಯಸ್ಸಿನಿಂದಲೇ ಮನೆ ಮನೆಗೆ ಪತ್ರಿಕೆ ಹಾಕುತ್ತ, ದಿನಸಿ ಆಂಗಡಿಗಳಲ್ಲಿ ಕೆಲಸ ಮಾಡುತ್ತ, ಪ್ರಾಥಮಿಕ, ಪ್ರೌಢ ಶಾಲೆ ವಿದ್ಯಾಭ್ಯಾಸ ಮುಗಿಸುತ್ತಾರೆ. ನಂತರ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿಯನ್ನು ಪೂರ್ಣಗೊಳಿಸಿದ ಅವರು, ಪದವಿ ತರಗತಿಗೆ ಸೇರುತ್ತಾರೆ. 1996ರಲ್ಲಿ ಜೀವನೋಪಯಕ್ಕಾಗಿ ಪಟ್ಟಣದ ಮದಕರಿ ವೃತ್ತದಲ್ಲಿ ಶಿವು ಬುಕ್ ಸ್ಟಾಲ್ ಎಂಬ ಹೆಸರಿನ ಅಂಗಡಿ ತೆರೆದು ಪುಸ್ತಕ ವ್ಯಾಪರದಲ್ಲಿ ತೊಡಗಿಕೊಂಡು ಇಂದಿಗೂ ಆ ವೃತ್ತಿಯನ್ನು ಮುಂದುವರೆಸಿಕೊಂಡು ಬರುತ್ತೀದ್ದಾರೆ.

ಪತ್ರಿಕೆ ಏಜೆಂಟ್:

1996ರಲ್ಲಿ ಪ್ರಥಮ ಬಾರಿಗೆ ಸಂಯುಕ್ತ ಕರ್ನಾಟಕ ಪತ್ರಿಕೆ ಏಜೆಂಟರಾಗಿ ನೇಮಕವಾಗುವ ಶಿವಪ್ಪ, 2021ರವರಗೆ ಸುಮಾರು 25 ವರ್ಷಗಳ ಕಾಲ ಏಜೆಂಟರಾಗಿ ಸೇವೆ ಸಲ್ಲಿಸಿದ್ದಾರೆ. 2004ರಿಂದ 2021ರವರಗೆ ಅದೇ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸುತ್ತ ಬಂದಿದ್ದರು. ಅಲ್ಲದೆ 2007 ರಲ್ಲಿ ಟ್ರ್ಯಾಕ್ಸೊಂದನ್ನು ಖರೀದಿ ಮಾಡಿ ಅಲ್ಲಿಂದ 2021ರವರೆಗೂ ದಾವಣಗೆರೆಯಿಂದ ಬಳ್ಳಾರಿವರೆಗೂ ಪತ್ರಿಕೆ ಸರಬರಾಜುದಾರರಾಗಿ ಅಲ್ಲು ದುಡಿದರು.

ಹೀಗಾಗಿ ಕೂಡ್ಲಿಗಿಯ ಜನ ಇಂದಿಗೂ ಪೇಪರ್ ಶಿವಣ್ಣ, ಶಿವಪ್ಪನೇಂದೆ ಅವರನ್ನು ಗುತುತಿಸಿ, ಪ್ರೀತಿಯಿಂದ ಕರೆಯುತ್ತಾರೆ. ಆದರೆ ಅಕಾಲಿಕವಾಗಿ ಎರಗಿಬಂದ ತಮ್ಮ ಉಮೇಶ್ ಸಾವು, ಶಿವಪ್ಪನನ್ನು ಸಾಕಷ್ಟು ಘಾಸೀಗೊಳಿಸಿತು. ಹೀಗಾಗಿ ಏಜೆಂಟ್ ಹಾಗೂ ವರದಿಗಾರಿಕೆ ಎರಡನ್ನು ಬಿಟ್ಟು ಕೇವಲ ಪುಸ್ತಕ ವ್ಯಾಪಾರ ಹಾಗೂ ರಾಜಕೀಯದಲ್ಲಿಯೇ ಅವರು ಮುಂದುವರೆದು ಕೊಂಡು ಬರುತ್ತೀದ್ದಾರೆ.

ಪಕ್ಷ ನಿಷ್ಠೆ ಕೈಬೀಡಲಿಲ್ಲ:

ನಿರಂತರ ಪ್ರಯತ್ನ ಹಾಗೂ ಪಕ್ಷ ನಿಷ್ಠೆ, ಕಾರ್ಯಕ್ಷಮತೆ ನನ್ನನ್ನು ಇಂದು ಒಂದು ಉನ್ನತ ಮಟ್ಟಕ್ಕೆ ಕರೆ ತಂದಿದೆ. ಇದರದಲ್ಲಿ ನನ್ನ ತಾಯಿ ಸುಲೋಚನಮ್ಮ ಸಂಬಂಧಿ ಎನ್. ಮುದ್ದಪ್ಪ, ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ತಮ್ಮ ಉಮೇಶ್, ಪತ್ನಿ ಗೀತಾ, ಅಕ್ಕ, ತಂಗಿ, ಸೇರಿದಂತೆ ನನ್ನ ಸಂಬಂಧಿಗಳು, ರಾಜಕೀಯ ಮುಖಂಡರು, ಸ್ನೇಹಿತರು, ಹಿತೈಷಿಗಳ ಆಶೀರ್ವಾದ, ಸಹಕಾರ ಬಹಳಷ್ಟಿದೆ ಎಂದು ಅಧ್ಯಕ್ಷರಾದ ಬಳಿಕ ಶಿವಪ್ಪ ತನಗೆ ಬೆಂಬಲಿಸಿ, ಸಹಕರಿಸಿದ ಎಲ್ಲರನ್ನು ಮನಸ್ಸಪೂರ್ವಕ ನೆನೆದು, ಧನ್ಯವಾದ ಅರ್ಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!