ಹುಳ್ಳಿಪ್ರಕಾಶ, ಸಂಪಾದಕರು,
ಸುನಾಮಿನ್ಯೂಸ್.
32 ಮಾಸಗಳ ಬಳಿಕ, ಹಗರಿಬೊಮ್ಮನಹಳ್ಳಿ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ಪ್ರಕಟವಾಗಿದೆ.
ಆದರೇ, ಎಲೇಕ್ಷನ್ ಡೇಟ್ ಮಾತ್ರ ಈ ತನಕವು ಅನೌನ್ಸ್ ಆಗಿಲ್ಲ. ಆದರೇ ಇಂದಲ್ಲ, ನಾಳೆ ಮುಹೂರ್ತ ಫಿಕ್ಸ್ ಆಗೇ, ಆಗುತ್ತೆ.
ಮೀಸಲಾತಿ ಪ್ರಕಟದ ಬಳಿಕ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೇರಲು ಆಕಾಂಷಿಗಳ ನಡುವೆ ಪೈಪೋಟಿ ಶುರುವಾಗಿದೆ. ಆದರೇ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕ್ಷೇತ್ರದ ಜೆಡಿಎಸ್ ಶಾಸಕ ನೇಮಿರಾಜನಾಯ್ಕ್ ಒತ್ತಡ ಮುಕ್ತರೆನ್ನಬಹುದು. ಆದರೇ ಯಾರಿಗೆ ಕಂಕಣಕಟ್ಟಿ, ಅಖಾಡಕ್ಕೀಳಿಸ ಬೇಕೆನ್ನುವ ವಿಚಾರದಲ್ಲಿ ಕಾಂಗ್ರೆಸಿನ ಮಾಜಿಶಾಸಕ ಭೀಮಾನಾಯ್ಕ್ ಗೆ ತಲೆ ಬಿಸಿ ಮಾಡಿರುವುದಂದು ದಿಟವಿದೆ.
ಏಕೆಂದರೆ, ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲಿ ಶಾಸಕರ ಬಣಕ್ಕಿಂತಲೂ, ಕಾಂಗ್ರೆಸ್ ಪಕ್ಷಕ್ಕೇನೆ ಒಂದು ಮತ ಹೆಚ್ಚಿದೆ. ಹೀಗಾಗಿ ಕೈ ಪಕ್ಷಕ್ಕೆ ಅಧಿಕಾರಕ್ಕೇರುವಂತಹ ಅವಕಾಶ ಇರುವುದು ಮೇಲ್ನೋಟಕ್ಕೆ ಕಾಣ್ತಾಯಿದೆ. ಈ ಕಾರಣಕ್ಕೇನೆ ಆಕಾಂಷಿಗಳು ಹೆಚ್ಚಿದ್ದರೆ, ಅಧಿಕಾರ ಹಿಡಿಯಲು ಬಿರುಸಿನ ರಾಜಕೀಯ ಚಟುವಟಿಕೆಗಳನ್ನು ಶುರುಹಚ್ಚಿಕೊಂಡಿದ್ದಾರೆ. ಈ ಅಂಶ ಕಾಂಗ್ರೆಸ್ ಪಾಳೆಯದಲ್ಲಿ ಅಭ್ಯರ್ಥಿ ಆಯ್ಕೆಯನ್ನು ಸಾಕಷ್ಟು ಕಗ್ಗಂಟಾಗಿಸಿದೆ ಕೂಡ.
23 ಸದಸ್ಯರು, ಶಾಸಕ, ಸಂಸದರ ತಲಾ ಒಂದೊಂದು ಮತ ಸೇರಿದಂತೆ ಹಗರಿಬೊಮ್ಮನಹಳ್ಳಿ ಪುರಸಭೆಯ ಒಟ್ಟು ಬಲ 25 ಸ್ಥಾನಗಳು. ಈ ಪೈಕಿ 2021, ಡಿಸೆಂಬರ್ ಕೊನೆಯವಾರದಲ್ಲಿ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸಿನಿಂದ 12 ಹಾಗು ಬಿಜೆಪಿಯಿಂದ 11 ಸದಸ್ಯರು ಆಯ್ಕೆಗೊಂಡರು. ಸಂಸದ ಈ.ತುಕಾರಾಂ ಮತ ಕೈಪಕ್ಷಕ್ಕೆ, ಇತ್ತ ಜೆಡಿಎಸ್ ಶಾಸಕ ನೇಮಿರಾಜನಾಯ್ಕ್ ಮತ ಬಿಜೆಪಿಗೆ ಸೇರಿದ್ರೂ ಕಾಂಗ್ರೆಸ್ ಒಂದು ಮತದ ಸರಳ ಬಹುಮತದೊಂದಿಗೆ ಅಧಿಕಾರಕ್ಕೇರುವ ಅವಕಾಶ ಮುಂದಿದೆ.
ಈ ಗೆಲುವಿನ ಅಂಶವೇ ಆಕಾಂಷಿಗಳು,
ಸಿಎಂ ಕಚೇರಿಯ ಜೊತೆಗೆ ತಮ್ಮ ಜಾತಿಯ,ಧರ್ಮಕ್ಕೆ ಸೇರಿದ ಸಚಿವರ ಕಡೆಯಿಂದಲೂ, ಸಂಸದರು, ಬೇರೆ ಜಿಲ್ಲೆಗಳ ಶಾಸಕರುಗಳು, ಇತ್ತ ಮಠಾಧೀಶರುಗಳಿಂದ, ಧರ್ಮದ ಗುರುಗಳಿಂದಲೂ, ಸಮುದಾಯದ ಮುಖಂಡರಿಂದಲೂ ಹೀಗೆ ತಮಗೆ ಗೊತ್ತಿರುವ ಎಲ್ಲಾ ಕಡೆಗಳಿಂದಲೂ ಒತ್ತಡಗಳನ್ನು ತರುವ ಕಾರ್ಯಾಚರಣೆಯನ್ನು ತುರುಸುಗೊಳಿಸಿದ್ದಾರೆ.
ಇನ್ನೂ, ಕೈಪಾಳೆಯದಲ್ಲಿ ಛೇರ್ಮನ್ ರೇಸ್ ನಲ್ಲಿರುವ ಆಕಾಂಷಿಗಳಲ್ಲೇರು ಮಾಜಿಶಾಸಕರ ಆಪ್ತ ಒಡನಾಟದಲ್ಲಿರುವವರು. ಆಕಾಂಷಿಗಳಲ್ಲಿ ನಾಲ್ಕು ಜನ ಮುಸ್ಲಿಂ ಕೌನ್ಸಿಲರ್ ಗಳಿದ್ದರೇ, ತಲಾ ಒಬ್ಬೋಬ್ಬರು ಕುರುಬರು,ಉಪ್ಪಾರ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆಯ್ಕೆಯಲ್ಲಿ ಜಾತಿ,ಧರ್ಮದ ಜೊತೆಗೆ ವರಿಷ್ಠರ ಶಿಫಾರಸ್ಸು ಎಲ್ಲವನ್ನೂ ನೋಡಲೇಬೇಕಾಗುತ್ತೆ.
ಹೀಗಾಗಿ ಅಭ್ಯರ್ಥಿ ಆಯ್ಕೆಯಲ್ಲಿ ಸ್ವಲ್ಪ ತಡವರಿಸಿದರೂ ಚುನಾವಣೆಯ ಸಮಯದಲ್ಲಿ ಏರುಪೇರಾದರೇ!? ಆತಂಕ ಎನ್ನುವುದು ಅವರ ಎದುರಿಗೆ ಬಾಯಿ ತೆರೆದು ಕೊಂಡೇ ನಿಂತಿದೆ.
ಆದರೇ, ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ, ನಾನು ಮಾಡುವ ಆಯ್ಕೆಗೆ ಎದುರಾಗಿ
ಸೆಡ್ಡು ಹೊಡೆದು, ರೇಬಲ್ ಆಗಿ, ಕೌನ್ಸಿಲರ್ ಗಳನ್ನು ಎತ್ತಿಕೊಂಡು ಹೋಗಿ ತನ್ನ ಎದುರಾಳಿ ಜೆಡಿಎಸ್ ಶಾಸಕರ ಬೆಂಬಲ ಪಡೆದು ಅಧ್ಯಕ್ಷರಾಗುವಂತಹ ಗಂಡೇದೆಯುಳ್ಳವರು ಆಕಾಂಷಿಗಳ ಪಡೆಯಲಿಲ್ಲ ಎನ್ನುವ ಸತ್ಯ ಕಾಂಗ್ರೆಸಿನ ಮಾಜಿಶಾಸಕರಿಗೆ ಗೊತ್ತಿದೆ. ಇದೇ ಸತ್ಯ ಹಾಲಿ ಶಾಸಕರಿಗೂ ತಿಳಿದಿದೆ.
ಏಕೆಂದರೆ ಆಕಾಂಷಿಗಳಾಗಿ ಗುರುತಿಸಿಕೊಂಡಿರುವ ಒಂಭತ್ತು ಸದಸ್ಯರು ರಾಜಕಾರಣವನ್ನೇ ಖಾಯಂ ಉದ್ಯೋಗವಾಗಿಸಿ ಕೊಂಡವರಲ್ಲ. ರಾಜಕಾರಣಕ್ಕೆ ಬಂದು, ತಮ್ಮ ವ್ಯಾಪಾರ, ವ್ಯವಹಾರಕ್ಕೆ ಅನಾನುಕೂಲ ಮಾಡಿಕೊಂಡಿದ್ದು ಬಿಟ್ಟರೇ ರಾಜಕಾರಣ ದಿಂದ ಗುಮ್ಮಿಕೊಂಡಿಲ್ಲ. ಆಗಂತಾ ತನ್ನ ಪತ್ನಿಯನ್ನು ಅಧ್ಯಕ್ಷ ಹುದ್ದೆಗೆ ಆಕಾಂಷಿ ಎನ್ನುವ ಪಟ್ಟಣದ ನಂಬರ್ ವನ್ ರಿಯಲ್ ಎಸ್ಟೇಟ್ ಏಜೆಂಟ್ ಗುಂಡ್ರು ಹನುಮಂತನಿಗೆ ಈ ಮಾತು ಅನ್ವಯಿಸುವುದಿಲ್ಲ!
ಹೀಗಾಗಿಯೇ, ಮೀಸಲಾತಿ ಅನೌನ್ಸ್ ಆದ ಮರು ಕ್ಷಣ ದಿಂದಲೇ ಹಾಲಿ, ಮಾಜಿ ಇಬ್ಬರು ಅತುರಕ್ಕೆ ಒಳಾಗಾದೇ, ವಂಧಿಮಾಗದರ ಒಲೈಕೆಗಳಿಗೆ, ಬಹುಪರಾಕ್ ಗೆ ಬಲಿಯಾಗದೇ, ಆಕಾಂಷಿಗಳು ಮತ್ತು ಅವರ ಪರವಾಗಿ ಹೇಳುವರ ಮಾತುಗಳಿಗೆ ತಲೆಯಾಡಿಸುವುದು ಬಿಟ್ಟರೇ, ಈ ತನಕವೂ ಇಂತಹವರೇ ಅಭ್ಯರ್ಥಿ ಎನ್ನುವ ಸೂಜಿಯ ಮೊನೆಯಷ್ಟು ಕ್ಲೂ ಹೊರಗೆ ಹೋಗದಂತೆ ತುಟಿಗೆ ಫೆವಿಕಲ್ ಹಚ್ಚಿಕೊಂಡಂತೆ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಹೋಗುತ್ತೀದ್ದಾರೆ.
ಕೊನೆಗೆ, ಎರಡು ಪಾಳೆಯ ದಿಂದ ಅಖಾಡಕ್ಕೆ ಅಧಿಕೃತವಾಗಿ ಇಳಿಯುವ ಅಭ್ಯರ್ಥಿಗಳು ಮಾತ್ರ ಕೋಟ್ಯಾಧೀಶರು!