- ಸುನಾಮಿ ನ್ಯೂಸ್
- ಹುಳ್ಳಿಪ್ರಕಾಶ, ಸಂಪಾದಕರು
ಸಂಡೂರು, ಅ,16
ಸಂಡೂರು ಬೈ ಎಲೇಕ್ಷನ್;
‘ಬಿಜೆಪಿ’ ಯಲ್ಲಿ ಹೆಚ್ಚಿದ ಟಿಕೆಟ್ ಗೊಂದಲ! ಹತ್ತಾರು ಸಲ ಕ್ಷೇತ್ರ ಸುತ್ತಿ ಬಂದಿರುವ ‘ಕೈ’ಸಂಸದರು.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲೆಗೆ ಆಗಮನವಾಗಿರುವುದು ನವೆಂಬರ್ ಹದಿಮೂರು ರಂದು ಉಪ ಚುನಾವಣೆ ಎದುರಿಸುತ್ತೀರುವ ಸಂಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಪಾಳೆಯದಲ್ಲಿ ಟಿಕೆಟ್ ಗೊಂದಲವನ್ನು ಸಾಕಷ್ಟು ಹೆಚ್ಚಿಸಿದೆ. ನಾಮಪತ್ರ ಸಲ್ಲಿಕೆಗೆ ಕ್ಷಣ ಗಣನೆ ಶುರುವಾದರೂ ಇಂತಹವರೇ ಅಭ್ಯರ್ಥಿ ಆಗಬಹುದೆನ್ನುವ ನಿಖರತೆಯೂ ಕಾಣ್ತಾಯಿಲ್ಲ.
ಸ್ಥಳಿಯ ಆಕಾಂಷಿಗಳಿಗಿಂತಲೂ ಬಳ್ಳಾರಿ, ಕೂಡ್ಲಿಗಿ ಹಾಗು ಹರಪನಹಳ್ಳಿ, ಜಗಳೂರು ಕ್ಷೇತ್ರಕ್ಕೆ ಸೇರಿದ ಹೊರಗಿನವರೇ ಆಕಾಂಷಿಗಳಾಗಿ ಭಾರೀ ಧಾಂಗುಡಿ ಇಟ್ಟಿದ್ದಾರೆ. ಹೀಗಾಗಿ ಪಕ್ಷದ ವರಿಷ್ಠರು, ಲೋಕಲ್ ಗೆ ಮಣೆ ಹಾಕಬೇಕೋ? ಇಲ್ಲ ನಾನ್ ಲೋಕಲ್ ಗೆ ಪ್ರಾತಿನಿಧ್ಯ ನೀಡಬೇಕೋ? ಎನ್ನುವ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ.
ಅದರಲ್ಲೂ, ಮಾಜಿ ಸಚಿವರು, ಗಂಗಾವತಿ ಕ್ಷೇತ್ರದ ಶಾಸಕರಾದ ಗಾಲಿ ಜನಾರ್ದನ ರೆಡ್ಡಿಗಾರು ಹದಿನಾಲ್ಕು ವರ್ಷಗಳ ಕಾಲದ ಬಳ್ಳಾರಿ ಜಿಲ್ಲೆಯ ಪ್ರವೇಶಕ್ಕಿದ್ದ ವನವಾಸ ದಿಂದ ತಾತ್ಕಲಿಕ ಮುಕ್ತಿ ಹೊಂದಿ, ಜಿಲ್ಲೆಗೆ ಪ್ರವೇಶಿಸಿದ ಬಳಿಕ ದಿಂದ ಲೋಹಾದ್ರಿ ನಾಡಿನ ಕಮಲ ಪಾಳೆಯದ ಬಿಫಾರ್ಂ ಗೊಂದಲ ಮತ್ತಷ್ಟು ಜಟೀಲದತ್ತ ಮುಖ ಮಾಡಿ ನಿಂತುಕೊಂಡಿದೆ.
ಜನಾರ್ದನ ರೆಡ್ಡಿ ಆಗಮನ,
2023ರ ಅಸೆಂಬ್ಲಿ ಎಲೇಕ್ಷನ್ ನಲ್ಲಿ ಗಾಲಿ ರೆಡ್ಡಿಗಾರು ಸ್ಥಾಪಿಸಿದ್ದ ಕೆಕೆಆರ್ ಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆಎಸ್. ದಿವಾಕರ್ ಅವರ ಟಿಕೆಟ್ ಹೋರಾಟಕ್ಕೆ ಭಾರೀ ಶಕ್ತಿ ಬಂದು ಬಿಟ್ಟಿದೆ. ರೆಡ್ಡಿ ಬಲಕ್ಕೀರ ಬಹುದು ಆಗಾಂತ ಸ್ಥಳಿಯರಲ್ಲದ ದಿವಾಕರ್ ಗೆ ಟಿಕೆಟ್ ಕನ್ ಫರ್ಮ್ ಎನ್ನಲಾಗದು ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿಯೇ ಜೋರಾಗಿವೆ.
ಹತ್ತಾರು ಸಲ ಕ್ಷೇತ್ರ ಸುತ್ತಿರುವ ‘ಕೈ’ ಸಂಸದ:
ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಜೋರಾಗಿರುವಾಗಲೇ ಇತ್ತ ಕಾಂಗ್ರೆಸ್ ಪಾಳೆಯದಲ್ಲಿ ಬಿಫಾರ್ಂ ವಿಚಾರದ ಶಬ್ಧವೇ ಕೇಳಿಸುತ್ತೀಲ್ಲ. ಹೆಚ್ಚು ಕಡಿಮೆ ಬಳ್ಳಾರಿ ಲೋಕಸಭಾ ಸದಸ್ಯರಾದ ಈ.ತುಕಾರಾಂ ಅವರ ಪತ್ನಿ ಇಲ್ಲವೆ ಮಗಳು ಇಬ್ಬರಲ್ಲಿ ಒಬ್ಬರು ಅಭ್ಯರ್ಥಿ ಆಗುವುದು ಖಚಿತವಾಗಿದೆ.
ಈ ಕಾರಣಕ್ಕೇನೆ ಸಂಸದರಾಗಿ ಗೆದ್ದ ಮರು ಕ್ಷಣ ದಿಂದಲೇ ಈ.ತುಕಾರಾಂ ರವರು ಕ್ಷೇತ್ರದಲ್ಲಿ ಸುತ್ತಾಟವನ್ನು ಬಿರುಸುಗೊಳಿಸಿದ್ದಾರೆ. ಈಗಾಗಲೇ ಹತ್ತಾರು ಸಲ ಇಡೀ ಕ್ಷೇತ್ರವನ್ನು ಸುತ್ತಿ ಉಪ ಚುನಾವಣೆಯ ಪ್ರಚಾರ ಕಾರ್ಯವನ್ನು ಸದ್ದು ಮಾಡದೇಯೇ ಪೂರ್ಣಗೊಳಿಸಿದ್ದಾರೆ.
ಪ್ರತಿ ಮತಗಟ್ಟೆವಾರು ಕೋಟ್ಯಾಂತರ ರೂಪಾಯಿಗಳ ಅನುದಾನದ ಅಭಿವೃದ್ಧಿ ಕಾರ್ಯಗಳಿಗೆ ಭರಪೂರ ಚಾಲನೆ ಕೊಟ್ಟು, ಉಪ ಸಮರ ಗೆಲ್ಲಲ್ಲು ಬೇಕಾದಂತಹ ಎಲ್ಲಾ ಕಸರತ್ತುಗಳನ್ನು ಅಚ್ಚಕಟ್ಟಾಗಿ ಪೂರೈಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಭಾರೀ ಫೈಟ್ ನಡೆಯುತ್ತಿದ್ದರೇ, ಇತ್ತ ಕಾಂಗ್ರೆಸ್ ಪಾಳೆಯದಲ್ಲಿ ಗೆಲುವಿನ ಲೆಕ್ಕಾಚಾರಗಳ ಬಗ್ಗೆ ಚರ್ಚೆಗಳು ಜೋರಾಗಿವೆ.
- ಹುಳ್ಳಿಪ್ರಕಾಶ, ಸಂಪಾದಕರು.